ನ.12: ಜವನೆರ್ ಬೆದ್ರದಿಂದ ಗೂಡುದೀಪ ಸ್ಪರ್ಧೆ ಮತ್ತು ಯೋಧ ನಮನ
ಮೂಡುಬಿದಿರೆ: ದೀಪಾವಳಿ ಸಂಭ್ರಮದ ಪ್ರಯುಕ್ತ ಜವನೆರ್ ಬೆದ್ರ ಫೌಂಡೇಶನ್ (ರಿ.) ವತಿಯಿಂದ ನವೆಂಬರ್ 12 ರಂದು ಸಂಜೆ 4.00 ಗಂಟೆಯಿಂದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಗೂಡು ದೀಪ ಸ್ಪರ್ಧೆ ಹಾಗೂ ಯೋಧ ನಮನ , ದೇವರ ನಾಮ (ಭಜನೆ), ಪದಗ್ರಹಣ 2023-24 ಕಾರ್ಯಕ್ರಮವು ನಡೆಯಲಿದೆ ಎಂದು ಜವನೆರ್ ಬೆದ್ರ ಸಂಘಟನೆಯ ಸಂಸ್ಥಾಪಕ ಅಮರಕೋಟೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಿಜೇತರಿಗೆ ಬಹುಮಾನಗಳು :
ಪ್ರಥಮ ಮತ್ತು ದ್ವಿತೀಯಕ್ಕೆ ನಗದು ಮತ್ತು ಪ್ರಶಸ್ತಿ ಪತ್ರ.
ಎರಡು ಸಮಾಧಾನಕರ ಬಹುಮಾನ ವಿತರಿಸಲಾಗುವುದು.
ವಿಶೇಷ ಸೂಚನೆ
ಸ್ಪರ್ಧೆ ಸಂಜೆ 4 ಗಂಟೆಯಿ೦ದ ಆರಂಭವಾಗುತ್ತದೆ (ಸಂಜೆ 5 ಗಂಟೆ ಒಳಗೆ ಗೂಡು ದೀಪವನ್ನು ನಿಗದಿಪಡಿಸಿದ ಜಾಗದಲ್ಲಿ ಅಳವಡಿಸಬೇಕು).
ಈ ಸ್ಪರ್ಧೆಯಲ್ಲಿ ಭಾಗವಹಿಸಲು 8 -11- 2023ರ ಸಾಯಂಕಾಲ 6 ಗಂಟೆಯ ಒಳಗೆ ತಮ್ಮ ಹೆಸರನ್ನು ನೊಂದಾಯಿಸಬೇಕು.
1 ಪ್ರಥಮ, ದ್ವಿತೀಯ ಹಾಗೂ ಎರಡು ಸಮಾಧಾನಕರ ಬಹುಮಾನ ನೀಡಲಾಗುವುದು.
ನಿಯಮಗಳು: ಸಾಂಪ್ರದಾಯಿಕ ಗೂಡುದೀಪ – ಸೀಮೆ ಕೋಲಿನ ಅಷ್ಟಪಟ್ಟಿ ಗೂಡುದೀಪಕ್ಕೆ ಕಿವಿ, ರೆಕ್ಕೆ, ಬಾಲ ಇರುವ ಹಾಗೆ, ಕಲರ್ ಪೇಪರ್ ಮಾತ್ರ ಬಳಕೆ, ಒಳಗೆ ಕಡ್ಡಾಯವಾಗಿ ಬಲ್ಬ್ ಅಳವಡಿಸಿ ಹೊರಗೆ ಬೆಳಕು ಚೆಲ್ಲಬೇಕು ಮತ್ತು ತೂಗು ಹಾಕಬೇಕು.
ಆಧುನಿಕ ಗೂಡುದೀಪ – ಅಷ್ಟಪಟ್ಟಿ ಗೂಡುದೀಪ ಇರಬೇಕು, ಯಾವುದೇ ವಸ್ತು ಉಪಯೋಗಿಸಬಹುದು, ತೂಗು ಹಾಕಬೇಕು.
ಗೂಡುದೀಪಕ್ಕೆ ಬಲ್ಬ್ ವಯರ್ ಸ್ಪರ್ಧಿಗಳೇ ತರತಕ್ಕದ್ದು.
ಅತೀ ಕಡಿಮೆ ಖರ್ಚಿನ ಕ್ರಿಯಾತ್ಮಕ ಗೂಡುದೀಪಕ್ಕೆ ಪ್ರಾಶಸ್ತ್ಯ ಎಂದು ತಿಳಿಸಿದ್ದಾರೆ.
0 Comments