ಎಸ್ ಎನ್ ಮೂಡಬಿದ್ರಿ ಪಾಲಿಟೆಕ್ನಿಕ್ : ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ 2023
ಎನ್ಎಸ್ಎಸ್ ನಿಂದ ನಾಯಕತ್ವ ಗುಣ : ಅಭಯ ಚಂದ್ರ ಜೈನ್
ಮೂಡಬಿದರೆ : ಎಸ್ ಎನ್ ಎಂ ಪಾಲಿಟೆಕ್ನಿಕ್ ಮೂಡಬಿದ್ರೆ ಇಲ್ಲಿಯ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ವಾರ್ಷಿಕ ವಿಶೇಷ ಶಿಬಿರ ಅಕ್ಟೋಬರ್ 8ರಂದು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಅಂಡಿಂಜೆ ಬೆಳ್ತಂಗಡಿ ತಾಲ್ಲೂಕು ಇಲ್ಲಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಾಲಿಟೆಕ್ನಿಕಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ ಅಭಯಚಂದ್ರ ಜೈನ್, ನಾಯಕತ್ವದಂತ ಗುಣಗಳನ್ನು ಬೆಳೆಸಿಕೊಳ್ಳಬೇಕಾದರೆ ಎನ್ಎಸ್ಎಸ್ ಮಾರ್ಗವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಘನ ಉಪಸ್ಥಿತಿಯಲ್ಲಿದ್ದ ಪ್ರತಾಪಸಿಂಹ ನಾಯಕ್ ಮಾನ್ಯ ವಿಧಾನ ಪರಿಷತ್ ಸದಸ್ಯರು ಕರ್ನಾಟಕ ಸರಕಾರ ಇವರು ಮಾತನಾಡಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಪಾಲಿಟೆಕ್ನಿಕ್ ನ ಪ್ರಾಂಶುಪಾಲರಾದ ಜೆ. ಜೆ. ಪಿಂಟೋ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಎಸ್ ಡಿ ಸಂಪತ್ ಸಾಮ್ರಾಜ್ಯ ಗೌರವ ಉಪಸ್ಥಿತಿಯಲ್ಲಿದ್ದರೆ, ಮುಖ್ಯ ಅತಿಥಿಗಳಾಗಿ ನಿತಿನ್ ಅಧ್ಯಕ್ಷರು ಗ್ರಾಮ ಪಂಚಾಯತ್ ಅಂಡಿಂಜೆ,
ಶ್ವೇತಾ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಅಂಡಿಂಜೆ, ರಂಜಿತ್ ಸದಸ್ಯರು ಗ್ರಾಮ ಪಂಚಾಯತ್, ಪರಮೇಶ್ವರ್ ಸದಸ್ಯರು ಗ್ರಾಮ ಪಂಚಾಯತ್ ಅಂಡಿಂಜೆ, ರಮೇಶ್ ಕುಮಾರ್ ಅಧ್ಯಕ್ಷರು ಎಸ್ ಡಿ ಎಂ ಸಿ ಸ.ಉ.ಪ್ರ.ಶಾಲೆ ಅಂಡಿಂಜೆ, ನಿರಂಜನ್ ಕೆ ಎಸ್ ಅಧ್ಯಕ್ಷರು ಲಯನ್ಸ್ ಕ್ಲಬ್ ವೇಣೂರು, ಜೀವಂದರ ಸಾಲಿಯಾನ್ ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಸ.ಉ.ಪ್ರ.ಶಾಲೆ ಅಂಡಿಂಜೆ, ಶಿವಶಂಕರ ಭಟ್ ಮುಖ್ಯ ಶಿಕ್ಷಕರು ಸ.ಉ.ಪ್ರ.ಶಾಲೆ ಅಂಡಿಂಜೆ, ನಳಿನಿ ಸಹಶಿಕ್ಷಕರು ಸ.ಉ.ಪ್ರ.ಶಾಲೆ ಅಂಡಿಂಜೆ, ಅನ್ವಿತ್ ಶಾಲಾ ವಿದ್ಯಾರ್ಥಿ ನಾಯಕ ಸ.ಉ.ಪ್ರ.ಶಾಲೆ ಅಂಡಿಂಜೆ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಿಬಿರಾರ್ಥಿ ದಿವ್ಯ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕಾಲೇಜಿನ ಎನ್ಎಸ್ಎಸ್ ಘಟಕ-1ರ ಕಾರ್ಯಕ್ರಮ ಅಧಿಕಾರಿ ರಾಮ್ ಪ್ರಸಾದ್ ಎಮ್ ರವರು ಪ್ರಸ್ತಾವನೆಯೊಂದಿಗೆ ಬಂದಂತಹ ಅತಿಥಿಗಳನ್ನು ಸ್ವಾಗತಿಸಿದರು. ಘಟಕ 2ರ ಕಾರ್ಯಕ್ರಮ ಅಧಿಕಾರಿ ಶ್ರೀ ಗೋಪಾಲಕೃಷ್ಣ K.S ವಂದಿಸಿದರು.
ಶಿಬಿರಾರ್ಥಿ ನಿತ್ಯಶ್ರೀ ಪ್ರತಿಜ್ಞಾ ವಿಧಿ ಬೋಧಿಸಿದರು. ಸಂಪೂರ್ಣ ಕಾರ್ಯಕ್ರಮವನ್ನು ಸಪ್ನ ನಿರೂಪಿಸಿದರು.
0 Comments