ಮೂಡುಬಿದಿರೆಯಲ್ಲಿ ತ್ರಿವಳಿ ಜಿಲ್ಲೆಗಳ ಸಂತರ ಸಮಾವೇಶ
ಮೂಡುಬಿದಿರೆ: ನಾವು ದೇಶದ ಯುವಕರನ್ನು ದಾರಿ ತಪ್ಪಿಸುತ್ತಿರುವ ಮಾದಕ ದ್ರವ್ಯ, ಮತಾಂತರ, ಲವ್ ಜಿಹಾದ್ ಹಾಗೂ ಭಯೋತ್ಪಾದನೆಯಿಂದ ಮುಕ್ತಗೊಳಿಸಲು ಪರಿಹಾರ ಕಂಡುಕೊಳ್ಳುವ ಅವಶ್ಯಕತೆಯಿದ್ದು ಅದಕ್ಕಾಗಿ ಎಲ್ಲರೂ ಸಂಘಟಿತರಾಗಬೇಕಾಗಿದೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ಅವರು ಅಖಿಲ ಭಾರತ ಸಂತ ಸಮಿತಿ ಕರ್ನಾಟಕ ಪ್ರಾಂತ ಕಮಿಟಿ ಹಾಗೂ ಮೂಡುಬಿದಿರೆಯ ಶ್ರೀ ದಿಗಂಬರ ಜೈನ ಮಠದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಮಹಾವೀರ ಭವನದಲ್ಲಿ ನಡೆದ ಕೊಡಗು, ದ.ಕ ಹಾಗೂ ಉಡುಪಿ ಮೂರು ಜಿಲ್ಲೆಗಳ ಸಂತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಸನಾತನ ಧರ್ಮ ಸದಾ ಇರುವಂತದ್ದು. ಆದ್ದರಿಂದ ನಾವು ಜಡವಾಗಿ ಕೈಕಟ್ಟಿ ಕುಳಿತುಕೊಳ್ಳದೆ ಕ್ರೀಯಾಶೀಲರಾಗಿರಬೇಕು ಎಂದು ಸಲಹೆ ನೀಡಿದರು.
ಕಾಸರಗೋಡು ಎಡನೀರು ಮಠದ ಚಿದಾನಂದ ಸ್ವಾಮೀಜಿ ಆಶೀರ್ವವಚನ ನೀಡಿ
ನಮ್ಮ ಧರ್ಮಕ್ಕೆ ಹಲವು ರೀತಿಯಲ್ಲಿ ತೊಂದರೆಗಳು ಆಗುತ್ತಿದೆ. ನಮ್ಮ ಧರ್ಮದ ಬಗ್ಗೆ ನಮ್ಮ ಹಿಂದೂ ಧರ್ಮದವರೇ ತೊಂದರೆ ನೀಡುವುದು ದೊಡ್ಡ ದುರಂತ ಇದಕ್ಕೆ ಸಂತರು ಎಚ್ಚೆತ್ತುಕೊಳ್ಳಬೇಕಾಗಿದೆ. ಯುವ ಜನತೆಯಲ್ಲಿ ಸನಾತನ ಧರ್ಮದ ಬಗ್ಗೆ ಜಾಗೃತಿ ಮೂಡಿಸಿ ಧರ್ಮವನ್ನು ಒಡೆಯುವ ಕೆಲಸವನ್ನು ತಡೆಯಬೇಕಾಗಿದೆ ಎಂದರು.
ಗುರುಪುರ ವಜ್ರದೇಹಿ ಮಠದ ರಾಜಶೇಖರನಂದ ಸ್ವಾಮೀಜಿ ಮಾತನಾಡಿ
ಸಂತರುಗಳು ಏಕತೆಯನ್ನು ಮೈಗೂಡಿಸಿಕೊಂಡರೆ ಮಾತ್ರ ನಮ್ಮ ಸಮಸ್ಯೆಗಳಿಗೆ ಪರಿಹಾರ. ಈಗಿನ ಪರಿಸ್ಥಿತಿಯಲ್ಲಿ ಹಿಂದೂ ಹಿಂದೂಗಳ ಮಧ್ಯೆ ಜಗಳ ಮಾಡುವ ಸ್ಥಿತಿ ಇದೆ. ಸನಾತನ ಧರ್ಮದ ಬಗ್ಗೆ ಅಪಪ್ರಚಾರ ಮಾಡುತ್ತಾ ಕ್ಷೇತ್ರಗಳನ್ನು ಅಪವಿತ್ರಗೊಳಿಸುವುದನ್ನು ತಡೆಯುವ ಪ್ರಯತ್ನ ಆಗಬೇಕು. ಇಡೀ ಪ್ರಪಂಚದಲ್ಲಿ ಹಿಂದೂ ಧರ್ಮದ ಬಗ್ಗೆ ಗೌರವ ಇದೆ. ಅದರೆ ಭಾರತದಲ್ಲಿ ಧರ್ಮದ ಅವಹೇಳನ ಆಗುತ್ತಿರುವುದು ದುರಂತ ಎಂದರು.
ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ
ಸನಾತನ ಧರ್ಮ ಮತ್ತು ಜ್ಯೆನ ಧರ್ಮ ಸಹೋದರರು ಇದ್ದಂತೆ.
ಅಖಿಲ ಭಾರತೀಯ ಸಂತ ಸಮಿತಿಯ ಉದ್ದೇಶ ಹಿಂದೂ ಸಮಾಜ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮತ್ತು ನಮ್ಮ ಧರ್ಮದಲ್ಲಿ ಹಲವಾರು ಅಚಾರ ವಿಚಾರ ಇದೆ. ಈ ಬಗ್ಗೆ ಎಲ್ಲಾ ಸ್ವಾಮೀಜಿಗಳನ್ನು ಒಟ್ಟುಗೂಡಿಸಿ ಧರ್ಮದ ಜಾಗ್ರತಿ ಮಾಡಿಸುವ ಉದ್ದೇಶ ಇದೆ. ನಮ್ಮ ಧರ್ಮದಲ್ಲಿ ಅಸ್ಪೃಶ್ಯತೆಯನ್ನು ತೊಡೆದು ಹಾಕಲು ನಾವು ಸಂತರು ಒಂದಾಗಬೇಕು. ಮಠ, ದೇವಸ್ಥಾನಗಳಿಗೆ ಬರುವ ಹುಂಡಿ ಹಣವನ್ನು ಅಲ್ಲಿಯೇ ವಿನಿಯೋಗ ಆಗಬೇಕು. ಹಿಂದೂ ಶ್ರೀಮಂತ ದೇವಸ್ಥಾನ ಹಣವನ್ನು ಹಿಂದೂ ಧರ್ಮದ ಉದ್ಧಾರಕ್ಕಾಗಿ ಬಳಸಬೇಕು ಎಂದರು.
ಮಾಣಿಲ ಮೋಹನದಾಸ ಸ್ವಾಮೀಜಿ, ರುದ್ರ ಮುನಿ ಸ್ವಾಮೀಜಿ, ಕೇರಳ ಕಾಲಡಿ ಶಂಕರ ಮಠದ ಸಾಯೀಶ್ವರನಂದ ಸ್ವಾಮೀಜಿ, ಚಿಕ್ಕಮಗಳೂರು ಕಡೂರು ಅಯ್ಯಪ್ಪ ಧರ್ಮಪೀಠದ
ಬದ್ರರಾಜ್ ಸ್ವಾಮೀಜಿ,
ಉಡುಪಿ ಶಂಕರಪುರ ಸಾಯಿ ಧರ್ಮ ಪೀಠದ ಈಶ್ವರ ಗುರೂಜಿ,
ಓಂ ಶ್ರೀ ಮಠ ಚಿಲಿಂಬಿ ಮಂಗಳೂರು ಇದರ ಶಿವಜ್ಞಾನ ಮಾಯಿ ಸ್ವಾಮೀಜಿ,
ದಾರವಾಡದ ಪರಮಾತ್ಮ ಈ ಸಂದರ್ಭದಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯ ಕಮಿಟಿಯ ಸಹ ಅಧ್ಯಕ್ಷೆ ಮಾತಾಶ್ರೀ ಓಂ ಶ್ರೀ ಶಿವಜ್ಞಾನಮಣಿ ಸರಸ್ವತಿ ಸಾಧ್ವಿ,
ಹಿರಿಯ ವಕೀಲ ಎಂ.ಬಾಹುಬಲಿ ಪ್ರಸಾದ್ ಸ್ವಾಗತಿಸಿದರು. ಸಮಿತಿಯ ರಾಜ್ಯಾಧ್ಯಕ್ಷ, ಮಂಗಳೂರು ಚಿಲಿಂಬಿಯಲ್ಲಿರುವ ಓಂ ಶ್ರೀ ಮಠದ ಮಹಾಮಂಡಲೇಶ್ವರ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಕಾರ್ಯಕ್ರಮ ನಿರೂಪಿಸಿದರು.
ಆಯೋಧ್ಯೆ ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಸಂತರ ಪಟ್ಟಿ, ವಾರಣಾಸಿಯಲ್ಲಿ ನಡೆಯುವ ಸಂಸ್ಕೃತಿ ಸಂಸತ್ತಿನಲ್ಲಿ ಭಾಗವಹಿಸುವುದು, ಕರ್ನಾಟಕದಲ್ಲಿ ಸಂತರು ಹಾಗೂ ಸನಾತನಿಗಳು ಎದುರಿಸುವ ವಿಷಯಗಳು, ಮುಜರಾಯಿ ಇಲಾಖೆಯಿಂದ ಮಠಗಳಿಗೆ ಅಗತ್ಯವಾದ ಅನುದಾನ ಲಭ್ಯವಾಗುವ ಕುರಿತು, ಸಂಘಟನಾ ವಿಪಲಿಕರಣ ಸಹಿತ ವಿವಿಧ ವಿಚಾರಗಳ ಬಗ್ಗೆ ಸಮಾವೇಶದಲ್ಲಿ ಚರ್ಚೆ ನಡೆಯಿತು.
0 Comments