ಆಳ್ವಾಸ್ ಎನ್‌ಎಸ್‌ಎಸ್ ಶಿಬಿರ ಸಮಾಪನ

ಜಾಹೀರಾತು/Advertisment
ಜಾಹೀರಾತು/Advertisment

 ಆಳ್ವಾಸ್ ಎನ್‌ಎಸ್‌ಎಸ್ ಶಿಬಿರ ಸಮಾಪನ


ಮುಡುಬಿದಿರೆ: ಒಳ್ಳೆಯ ಶಿಕ್ಷಣ ವ್ಯವಸ್ಥೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಅನುಸಂಧಾನವಾಗಿರಬೇಕು. ಎನ್‌ಎಸ್‌ಎಸ್ ಈ ಪರಿಕಲ್ಪನೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ಶ್ರದ್ಧೆ ಹಾಗೂ ಪೂರ್ವ ಸಿದ್ದತೆಗಳು ಎನ್‌ಎಸ್‌ಎಸ್ ಕಲಿಸುವ ಆರಂಭಿಕ ಪಾಠ.ಸಂಘರ್ಷವಾಗದ ಅನುಸಂಧಾನದ ಬದುಕನ್ನು ರಾಷ್ಟಿçÃಯ ಸೇವಾ ಯೋಜನೆಯು ಕಲಿಸುತ್ತದೆ ಎಂದು ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ ಕೋಟ್ಯಾನ್ ನುಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಳ್ವಾಸ್ ಪದವಿ ಪಿಯು ಕಾಲೇಜು ಎನ್‌ಎಸ್‌ಎಸ್ ಯೋಜನೆಯ ವತಿಯಿಂದ ಇರ್ವತ್ತೂರು ಕೊಳಕೆ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ಸ್ವಚ್ಛ ಪರಿಸರ ಮತ್ತು ಸ್ವಚ್ಛ ಸಮಾಜಕ್ಕಾಗಿ ಯುವಜನತೆ-ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. 

ಶಿಬಿರಕ್ಕೆ ಸಹಕರಿಸಿದ ಇರ್ವತ್ತೂರು ಗ್ರಾಪಂ ಅಧ್ಯಕ್ಷ ಭರತ ಕುಮಾರ ಜೈನ್ ಅವರನ್ನು ಸನ್ಮಾನಿಸಲಾಯಿತು. ಅಂಕಿತಾ ಹಾಗೂ ಜೀವನ್‌ನ್ನು ಗೌರವಿಸಲಾಯಿತು. 

ಆಳ್ವಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೋ.ಸದಾಕತ್ ಅಧ್ಯಕ್ಷತೆವಹಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಜಿಪಂ ಮಾಜಿ ಸದಸ್ಯ ಉದಯ್ ಕೋಟ್ಯಾನ್, ಇರ್ವತ್ತೂರು ಗ್ರಾಪಂ ಸದಸ್ಯ ಶರತ್ ಅಂಚನ್, ಆಳ್ವಾಸ್ ಸಂಸ್ಕೃತ ವಿಭಾಗದ ಮುಖ್ಯಸ್ಥ, ಶಿಬಿರದ ವ್ಯವಸ್ಥಾಪಕ ಅಂಬರೀಶ್ ಚಿಪಳೂಣಕರ್ ಉಪಸ್ಥಿತರಿದ್ದರು. 

ಶಿಬಿರಾಧಿಕಾರಿ ಅರುಣ್ ಕುಮಾರ್ ವರದಿ ವಾಚಿಸಿದರು. ಶಿಬಿರಾರ್ಥಿಗಳಾದ ವರುಣ್ ಕಶ್ಯಪ್, ಶ್ರೀರಕ್ಷಾ, ಬಸವೇಶ್, ರ‍್ಯನ್ ಜಯಕುಮಾರ್ ಅನುಭವ ಹಂಚಿಕೊAಡರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕಿ ಶೆಲೆಟ್ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು. ಮೇಘನಾ ಸ್ವಾಗತಿಸಿ, ಆಕಾಶ್ ವಿಜೇತರ ವಿವರ ನೀಡಿದರು. ಸ್ವಾತಿ ವಂದಿಸಿದರು.

Post a Comment

0 Comments