ಮೂಡುಬಿದಿರೆಯಲ್ಲಿ 34ನೇ ವರ್ಷದ ಶ್ರೀ ಶಾರದಾ ಮಹೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯಲ್ಲಿ 34ನೇ ವರ್ಷದ ಶ್ರೀ ಶಾರದಾ ಮಹೋತ್ಸವ



ಮೂಡುಬಿದಿರೆ: ಶ್ರೀ ವೀರ ಮಾರುತಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ಮೂಡುಬಿದಿರೆ ಶ್ರೀ ವೆಂಕಟರಮಣ ದೇವಸ್ಥಾನದ ಕಲಾಮಂದಿರದಲ್ಲಿ ನಡೆಯುತ್ತಿರುವ 34ನೇ ವರ್ಷದ ಮೂಡುಬಿದಿರೆ ಶ್ರೀ ಶಾರದಾ ಮಹೋತ್ಸವದ ಶ್ರೀದೇವಿಯ ವಿಗ್ರಹವನ್ನು ವಿಶ್ವನಾಥ್ ಭಟ್ ಮತ್ತು ಶಾಂತೇರಿ ವಿಶ್ವನಾಥ ಭಟ್ ಪ್ರತಿಷ್ಠಾಪಿಸಿದರು. 




ಟ್ರಸ್ಟ್ ನ ಜ್ಞಾನೇಶ್ವರ ಪೈ ,ಪ್ರಸನ್ನ ವಿ ಶೆಣೈ, ರಘುವೀರ ಕಾಮತ್, ರಾಮನಾಥ ಭಟ್, ಸತ್ಯನಾರಾಯಣ ಪೈ, ಯೋಗೀಶ ಪ್ರಭು, ನರಸಿಂಹ ಕಾಮತ್, ಗಣೇಶ ಪ್ರಭು, ಅನಂತ ಪ್ರಭು, ರಮಾಕಾಂತ ಶೆಣೈ, ಶ್ರೀ ವೆಂಕಟರಮಣ ದೇವಾಲಯದ ಆಡಳಿತ ಮಂಡಳಿ ಜಿ ಉಮೇಶ್ ಪೈ, ರಾಘವೇಂದ್ರ ಕಾಮತ್, ಮನೋಜ್ ಶೆಣೈ, ರಘುವೀರ ಶೆಣೈ ಮತ್ತು ಹಿರಿಯರಾದ ವಿಶ್ವನಾಥ ಪ್ರಭು, ಬಿ ರತ್ನಾಕರ ಕಾಮತ್ ಮತ್ತಿತರರಿದ್ದರು. 

ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯನ್ನು ಮೂಡುಬಿದಿರೆ ಕೆನರಾ ಬ್ಯಾಂಕ್ ಪ್ರಬಂಧಕರಾದ ಪ್ರಮೋದ್ ಕುಮಾರ್ ಉದ್ಘಾಟಿಸಿದರು. ಟ್ರಸ್ಟ್ನ ನಿತ್ಯಾನಂದ ಪೈ, ಯೋಗ ಸಂಘಟಕ ಶ್ರೀ ಶೇಖರ್ ಕಡ್ತಲ, ಬಾಲ ನಟಿ ಸ್ವಾತಿ ಭಟ್ ಉಪಸ್ಥಿತರಿದ್ದರು. ಕುಣಿತ ಭಜನಾ ಸ್ಪರ್ಧೆಯನ್ನು ವಿಶ್ವನಾಥ ಪ್ರಭು ಉದ್ಘಾಟಿಸಿದರು. ವಲಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಿತು. ವೇದಮೂರ್ತಿ ಹರೀಶ್ ಭಟ್ ಮತ್ತು ತಂಡದವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

☝️ಚಿತ್ರ : ಮಾನಸ ಡಿಜಿಟಲ್ಸ್ ಮೂಡುಬಿದಿರೆ

Post a Comment

0 Comments