ಕಲ್ಲಮುಂಡ್ಕೂರಿನಲ್ಲಿ ಯೋಗ ಶಿಬಿರದ ಪ್ರಥಮ ವಾರ್ಷಿಕೋತ್ಸವ
ಮೂಡುಬಿದಿರೆ: ಪತಂಜಲಿ ಯೋಗಪೀಠ ಹರಿದ್ವಾರ ಇದರ ಮಾರ್ಗದರ್ಶನದಲ್ಲಿ ಕಲ್ಲಮುಂಡ್ಕೂರಿನ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಉಚಿತ ಯೋಗ ಶಿಬಿರದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮವು ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.
ವೇಣೂರು ನಮನ ಕ್ಲಿನಿಕ್‌ನ ಡಾ.ಶಾಂತಿಪ್ರಸಾದ್ ಇಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಯೋಗವು ಶಾರೀರಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ನಮ್ಮನ್ನು ಸದೃಢಗೊಳಿಸುತ್ತದೆ. ಬದುಕಿನ ಜಂಜಾಟದ ಮಧ್ಯೆ ನಮಗೆ ತಾಳ್ಮೆ ಬಹು ಮುಖ್ಯ ನಾವು ಯೋಗವನ್ನು ಪ್ರತಿನಿತ್ಯ ಮಾಡುವುದರಿಂದ ತಾಳ್ಮೆಯನ್ನು ಹೆಚ್ಚಿಸುತ್ತದೆ ಅದಕ್ಕೆ ವೈದ್ಯನಾಗಿರುವ ತಾನೇ ಸಾಕ್ಷಿ ಎಂದರು.
ಕಲ್ಲಮುಂಡ್ಕೂರು ದೈಲಬೆಟ್ಟು ಶ್ರೀ ಅಬ್ಬಗದಾರಗ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಜಯಪ್ರಕಾಶ್ ಪಡಿವಾಳ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಲ್ಲಮುಂಡ್ಕೂರು ಗ್ರಾಪಂ ಅಧ್ಯಕ್ಷೆ ಪ್ರೇಮಾ ಶೆಟ್ಟಿ, ಸದಸ್ಯರಾದ ಲೀಲಾ, ಸುರೇಖ,
ಓಂಕಾರ್ ಸ್ಪೋಟ್ಸ್ ೯ ಗೇಮ್ಸ್ ನ ಅಧ್ಯಕ್ಷ ಸುಕುಮಾರ್,
ನ್ಯಾಯವಾದಿ ಶಾಂತಿ ಪ್ರಸಾದ್ ಹೆಗ್ಡೆ, ಉದ್ಯಮಿ
ವರದರಾಯ ಕಾಮತ್,
ಕೆ.ಎಫ್.ಸಿ ಯ ಮೇಘನಾಥ್,
ಕಲ್ಲಮುಂಡ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ತ್ರಿವೇಣಿ ಆಚಾರ್ಯ,ವಯೋಗ ಶಿಕ್ಷಕ ಶರತ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನಾರಾಯಣ ಕುಂದರ್ ಸ್ವಾಗತಿಸಿದರು. ವಾರ್ಷಿಕೋತ್ಸವದ ಪ್ರಯುಕ್ತ ನಡೆಸಿದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.
ಕಲ್ಲಮುಂಡ್ಕೂರು ಪ್ರೌಢ ಶಾಲೆಯ ಶಿಕ್ಷಕ ಗುರು ಎಂ.ಪಿ. ಮತ್ತು ಶೇಖರ್ ಎಂ. ಕಾರ್ಯಕ್ರಮ ನಿರೂಪಿಸಿದರು. ಕಲ್ಲಮುಂಡ್ಕೂರಿನ ವಿವಿಧ ಸಂಸ್ಥೆಗಳಾದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ವ್ಯವಸಾಯ ಸೇವಾ ಸಹಕಾರಿ ಸಂಘ, ಓಂಕಾರ್ ಸ್ಪೋರ್ಟ್ಸ್-ಗೇಮ್ಸ್ ಕೆ.ಎಫ್.ಸಿ ಪತಂಜಲಿ ಯೋಗ ಪರಿವಾರದ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
0 Comments