ಕಾಂಗ್ರೆಸ್ ಸರಕಾರದ 80% ಕಮೀಷನ್ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ

ಜಾಹೀರಾತು/Advertisment
ಜಾಹೀರಾತು/Advertisment

 ಕಾಂಗ್ರೆಸ್ ಸರಕಾರದ 80% ಕಮೀಷನ್  ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ



ಮೂಡುಬಿದಿರೆ: ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ನಡೆಯುತ್ತಿರುವ 80% ಕಮೀಷನ್ ದಂಧೆ ಸಹಿತ ಭ್ರಷ್ಟಾಚಾರವನ್ನು ವಿರೋಧಿಸಿ ಮೂಡುಬಿದಿರೆ ಬಿಜೆಪಿ ಮುಲ್ಕಿ-ಮೂಡುಬಿದಿರೆ ಮಂಡಲದ ವತಿಯಿಂದ ತಾಲೂಕು ಆಡಳಿತ ಸೌಧದ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಯಿತು.



ಶಾಸಕ ಉಮಾನಾಥ ಕೋಟ್ಯಾನ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಬಿಜೆಪಿ ಸರಕಾರವನ್ನು 40% ಸರಕಾರವೆಂದು ದೂಷಿಸುತ್ತಾ, ಜನರಿಗೆ ವಿವಿಧ ರೀತಿಯ ಗ್ಯಾರಂಟಿಗಳ ಸುಳ್ಳು ಭರವಸೆಯನ್ನು ನೀಡುತ್ತಾ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಮಾಡುತ್ತಿರುವ ದುರಾಡಳಿತ, ಭ್ರಷ್ಟಾಚಾರವನ್ನು ಮಾಡುತ್ತಿದೆ. ಜನ ವಿರೋಧಿ ಆಡಳಿತ ನೀಡುತ್ತಿರುವ ಭ್ರಷ್ಟ ಸರಕಾರವನ್ನು, ಕೋಟಿ ಕೋಟಿ ರೂ ಲಂಚ- ಕಮೀಷನನ್ನು ಪಡೆದು ಜನರಿಗೆ ಮೋಸ ಮಾಡುತ್ತಿರುವ ಸರಕಾರವನ್ನು ಕಿತ್ತೊಗೆಯಬೇಕು.

200 ಯುನಿಟ್ ಕರೆಂಟ್ ಫ್ರೀ ಬದಲು ಕರೆಂಟಿಗೆ ರೇಟ್ 2 ಪಟ್ಟು ಜಾಸ್ತಿ ಮಾಡಿ ಎಲ್ಲಾ ಜನತೆಯನ್ನು ಊಟಿ ಮಾಡುತ್ತಿರುವ ಸರಕಾರದ ಕ್ರಮ ಬಹಳ ಬೇಸರ ತರಿಸಿದೆ ಇದನ್ನು ನಾವು ಧಿಕ್ಕರಿಸುತ್ತೇವೆ.

  ಕಮೀಷನ್ ಏಜೆಂಟ್ ಆಗಿರುವ ಈ ಸರಕಾರ ರಾಜಿನಾಮೆ ಕೊಡಬೇಕು. ಜನರಿಗೆ ನ್ಯಾಯ ಕೊಡಲು ಅಸಮರ್ಥವಾಗಿರುವ ಈ ಸರಕಾರವನ್ನು ಕಿತ್ತೊಗೆಯಬೇಕೆಂದು ರಾಜ್ಯಪಾಲರನ್ನು ಒತ್ತಾಯಿಸಿದರು.

  ಪ್ರತಿಭಟನೆಯಲ್ಲಿ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರವನ್ನು ಹಾಕಲಾಯಿತು.

  ಭ್ರಷ್ಟಾಚಾರದ ಸರಕಾರವನ್ನು ಕಿತ್ತೊಗೆಯಬೇಕೆಂದು ರಾಜ್ಯಪಾಲರಿಗೆ  ತಹಶೀಲ್ದಾರ್ ಮೂಲಕ ಮನವಿಯನ್ನು ಸಲ್ಲಿಸಲಾಯಿತು.

 ಮಂಡಲದ ಅಧ್ಯಕ್ಷ ಸುನೀಲ್ ಆಳ್ವ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ  ಈಶ್ವರ ಕಟೀಲ್, ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಮೂಡುಬಿದಿರೆ ಮಂಡಲದ ಪ್ರ.ಕಾರ್ಯದರ್ಶಿ ಗೋಪಾಲ್ ಶೆಟ್ಟಿಗಾರ್, ಪಕ್ಷದ ಪ್ರಮುಖರಾದ ನಾಗರಾಜ ಪೂಜಾರಿ, ಸೋಮನಾಥ ಕೋಟ್ಯಾನ್, ಕಿಶೋರ್, ವಲೇರಿಯನ್ ಕುಟಿನ್ಹ, ಯೋಗೀಶ್ ಶೆಟ್ಟಿ, ಕರುಣಾಕರ ಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿದ್ದರು.

Post a Comment

0 Comments