ಕಲ್ಲಬೆಟ್ಟು ಎಂ.ಕೆ.ಶೆಟ್ಟಿ ಸ್ಕೂಲ್ ನಲ್ಲಿ ವಾರ್ಷಿಕ ವಿಶೇಷ ಶಿಬಿರ 2023-24 ಆರಂಭ

ಜಾಹೀರಾತು/Advertisment
ಜಾಹೀರಾತು/Advertisment

 ಕಲ್ಲಬೆಟ್ಟು ಎಂ.ಕೆ.ಶೆಟ್ಟಿ ಸ್ಕೂಲ್ ನಲ್ಲಿ ವಾರ್ಷಿಕ ವಿಶೇಷ ಶಿಬಿರ 2023-24  ಆರಂಭ



ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು(ಪದವಿಪೂರ್ವ), ರಾಷ್ಟ್ರೀಯ ಸೇವಾ ಯೋಜನಾ ಘಟಕ, ಎಕ್ಸಲೆಂಟ್ ಪದವಿಪೂರ್ವ ಕಾಲೇಜು ಕಲ್ಲಬೆಟ್ಟು ಮೂಡುಬಿದಿರೆ ಇವುಗಳ ವತಿಯಿಂದ 'ಸ್ವಚ್ಛ ಪರಿಸರ ಮತ್ತು ಸ್ವಸ್ಥ ಸಮಾಜಕ್ಕಾಗಿ ಯುವಜನತೆ' ಎಂಬ ಧ್ಯೇಯದೊಂದಿಗೆ ಏಳು ದಿನಗಳ ಕಾಲ  ಕಲ್ಲಬೆಟ್ಟುವಿನ ಎಂ.ಕೆ.ಶೆಟ್ಟಿ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆಯುವ ವಾರ್ಷಿಕ ವಿಶೇಷ ಶಿಬಿರ 2023-24  ಮಂಗಳವಾರ ಸಂಜೆ ಆರಂಭಗೊಂಡಿತು.



  ರಾಷ್ಟ್ರೀಯ ಸೇವಾ ಯೋಜನೆಯ ಮಂಗಳೂರು ವಿಭಾಗೀಯ ಅಧಿಕಾರಿ ಸವಿತಾ ಎರ್ಮಾಳ್ ಶಿಬಿರಕ್ಕೆ ಚಾಲನೆಯನ್ನು ನೀಡಿ ಮಾತನಾಡಿ ಎನ್ ಎಸ್ ಎಸ್ ನ ಕೊಡುಗೆ ಅಮೂಲ್ಯವಾದುದು.  ವಿದ್ಯಾರ್ಥಿಗಳು  ತಾವು ಶಾಲು, ಬ್ಯಾಜ್ ಹಾಕಿಕೊಂಡು ತಾವು ಎನ್ ಎಸ್ ಎಸ್ ನ ವಿದ್ಯಾರ್ಥಿಗಳೆಂದು ಗುರುತಿಸಿಕೊಳ್ಳುವುದಲ್ಲ ಬದಲಾಗಿ ನೀವು ಸರಳ ನಡೆನುಡಿ ಮೈಗೂಡಿಸಿಕೊಂಡು, ಇನ್ನೊಬ್ಬರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ ಗುರುತಿಸಿಕೊಳ್ಳುವಂತ್ತಾಗಬೇಕೆಂದರು.

   ಯಾರೋದೋ ಒತ್ತಾಯಕ್ಕೆ ನೀವು ಶಿಬಿರಾರ್ಥಿಗಳಾಗುವುದಲ್ಲ. ನಿಮ್ಮಲ್ಲಿ ಮನಸಲ್ಲಿ ನಾವು ಎನ್‌ ಎಸ್ ಎಸ್ ನ ವಿದ್ಯಾರ್ಥಿಗಳು  ಮನೋಭಾವ ಮೂಡಬೇಕು ಆಗ ನಿಮ್ಮನ್ನು ಯಾರಿಂದಲೂ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದರು.



 ಮೊಬೈಲ್ ವ್ಯಸನ ಹಾಗೂ ವಿವಿಧ ದುಶ್ಚಟಗಳಿಂದ ದೂರವಿರಿ ಎಂದು ಸಲಹೆ ನೀಡಿದ ಅವರು ಖಾಸಗಿ ಶಾಲೆಗಳಲ್ಲಿ ಶಿಬಿರಗಳನ್ನು ಮಾಡುವುದು ಕಷ್ಟವಲ್ಲ ಆದರೆ ಸರಕಾರಿ ಶಾಲೆಗಳಲ್ಲಿ ಶಿಬಿರಗಳನ್ನು ಮಾಡಲು ಕಷ್ಟಸಾಧ್ಯವಾಗಿದೆ. ಸರಕಾರದಿಂದ ಸಿಗುವ ಅನುದಾನಗಳು ಸಾಕಾಗುವುದಿಲ್ಲ ಈ ಸಂದರ್ಭದಲ್ಲಿ ದಾನಿಗಳ ಸಹಕಾರ ಕೋರುವುದು ಅನಿವಾರ್ಯವಾಗಿದೆ ಆದರೆ ಕೆಲವೊಂದು ಸಲ ದಾನಿಗಳು ಕೂಡಾ ಸಹಕಾರ ನೀಡದೆ ಮೆತ್ತಗೆ ದೂರ ಸರಿಯುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

  ಎಕ್ಸಲೆಂಟ್ ಕಾಲೇಜಿನ  ಅಧ್ಯಕ್ಷ ಯುವರಾಜ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.


 ಉದ್ಯಮಿ ಕೆ.ಶ್ರೀಪತಿ ಭಟ್, ಗಂಟಾಲ್ ಕಟ್ಟೆ ಬದ್ರಿಯಾ ಜುಮ್ಮಾ ಮಸೀದಿಯ ಧರ್ಮಗುರು ಮೊಹಮ್ಮದ್ ಬಶೀರ್ ದಾರಿಮಿ, ಪುರಸಭಾ ಸದಸ್ಯ ಜೊಸ್ಸಿ ಮಿನೇಜಸ್, ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ಮೂಡುಬಿದಿರೆ ತುಳುಕೂಟದ ಸ್ಥಾಪಕಾಧ್ಯಕ್ಷ ಚಂದ್ರಹಾಸ ದೇವಾಡಿಗ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಶುಭ ಹಾರೈಸಿದರು.

ಎಕ್ಸಲೆಂಟ್ ನ ಆಡಳಿತ ನಿರ್ದೇಶಕ ಡಾ.ಬಿ.ಪಿ.ಸಂಪತ್ ಕುಮಾರ್, ಶೈಕ್ಷಣಿಕ ನಿರ್ದೇಶಕ ಪ್ರೊ.ಪುಷ್ಪರಾಜ್, ಎಕ್ಸಲೆಂಟ್ ಪ.ಪೂ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್, ಎಂ.ಕೆ.ಶೆಟ್ಟಿ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲೆ ದಿವ್ಯಾ ನಾಯಕ್ ಗೌರವ ಉಪಸ್ಥಿತರಿದ್ದರು.

ಶಿಭಿರಾಧಿಕಾರಿ ತೇಜಸ್ವಿ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ನಡ ಉಪನ್ಯಾಸಕ ಡಾ.ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments