*ನನ್ನ ಮಣ್ಣು ನನ್ನ ದೇಶ*- ಅಮೃತ ಕಳಸ
ಹಸ್ತಾಂತರ ಕಾರ್ಯಕ್ರಮ
ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು, ತಾಲೂಕು ಪಂಚಾಯತ್ ಮೂಡುಬಿದಿರೆ, ನೆಹರು ಯುವ ಕೆಂದ್ರ ಮಂಗಳೂರು ಹಾಗೂ ಅಂಚೆ ಇಲಾಖೆ ಇದರ ಸಹಯೋಗದೊಂದಿಗೆ ನನ್ನ ಮಣ್ಣು ನನ್ನ ದೇಶ ಅಮೃತ ಕಳಶ ಯಾತ್ರೆ ಕಾರ್ಯಕ್ರಮವು ಅ. 17 ರಂದು ತಾಲೂಕು ಪಂಚಾಯತ್ ನಲ್ಲಿ ಹಮ್ಮಿಕೊಳ್ಳಲಾಯಿತು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ್ ಸಿ. ಅವರು ಮಾತನಾಡಿ, ರಾಷ್ಟ್ರವನ್ನು ಕಟ್ಟುವ ಯುವಜನತೆ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಸಮಾಜದಲ್ಲಿ ವಿದ್ಯಾರ್ಥಿಗಳ ಪಾತ್ರ ಹೆಚ್ಚಿದ್ದು, ಎಲ್ಲರೂ ಜವಾಬ್ದಾರಿಯುತ ಕೆಲಸಗಳಲ್ಲಿ ಕಾಣಿಸಿಕೊಳ್ಳಬೇಕು. ಪ್ರಜಾಪ್ರಭುತ್ವದ ಮೂಲ ಎಂದರೆ ಅದು ಗ್ರಾಮ ಪಂಚಾಯತ್ ಹೀಗಾಗಿ ಮೂಡುಬಿದಿರೆ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಒಟ್ಟು 12 ಗ್ರಾಮ ಪಂಚಾಯತ್‍ಗಳ ಬೆಂಬಲದಿಂದ ನೆಲದ ಪವಿತ್ರ ಮಣ್ಣನ್ನು ಸಂಗ್ರಹಿಸಲಾಗಿದೆ ಎಂದರು.
ಇದೇ ವೇಳೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಬಳಿಕ ನೆಹರು ಯುವ ಕೇಂದ್ರದ ತಾಲೂಕು ಸಂಯೋಜಕರಾದ ವೈಷ್ಣವ್ ಹೆಗ್ಡೆ ಇವರಿಗೆ ಪವಿತ್ರ ಮಣ್ಣು ತುಂಬಿದ ಅಮೃತ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಉಪ ಅಂಚೆ ನಿರೀಕ್ಷಕರಾದ ಪ್ರಹ್ಲಾದ್ ನಾಯಕ್ ಹಾಗೂ ಅಂಚೆ ಇಲಾಖಾ ಸಿಬ್ಬಂದಿಗಳು, ಆಳ್ವಾಸ್ ಕಾಲೇಜಿನ ಎನ್‍ಎಸ್‍ಎಸ್ ಘಟಕದ ಸಂಯೋಜಕರಾದ ವಸಂತ್, ತಾ.ಪಂ. ಪ್ರಧಾನ ವ್ಯವಸ್ಥಾಪಕರಾದ ವಸಂತ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತ್ ಕಾರ್ಯದರ್ಶಿಗಳು, ಪಂಚಾಯತ್ ಸಿಬ್ಬಂದಿಗಳು ಹಾಗೂ ತಾಲೂಕು ಪಂಚಾಯತ್ ಸಿಬ್ಬಂದಿಗಳು, ಆಳ್ವಾಸ್ ಕಾಲೇಜು ಎನ್ ಎಸ್ ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
0 Comments