ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ಅಮನಬೆಟ್ಟು, ಪಡುಮಾರ್ನಾಡ್ ಇದರ ಸಕ್ರೀಯ ಸದಸ್ಯ ರತ್ನಾಕರ್ ಕೋಟೆಬಾಗಿಲು ಇವರ ಸಹೋದರ ಸದಾನಂದ ಕೆ. ಸುವರ್ಣ ಇವರಿಗೆ ತುರ್ತು ಚಿಕಿತ್ಸೆಗೆ ಸಾಯಿ ಮಾರ್ನಾಡ್ ತಂಡದಿಂದ ರೂ.10000 ವನ್ನು ಭಾನುವಾರ ನೀಡಲಾಯಿತು.
ಸದಾನಂದ ಅವರು ಕೆಲಸ ಶುಕ್ರವಾರ ರಾತ್ರಿ ಕೆಲಸ ಮುಗಿಸಿp ಮನೆಗೆ ಹೋಗುತ್ತಿದ್ದ ಸಂದರ್ಭ ಗಾಡಿಯಿಂದ ಬಿದ್ದು ತಲೆಗೆ ಏಟಾಗಿದ್ದು ತಕ್ಷಣ ಅವರನ್ನು ಎ. ಜೆ. ಆಸ್ಪತ್ರೆ ಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಮಿತಿಯ ಸದಸ್ಯ ರತ್ನಾಕರ್ ಇವರಿಗೆ 2ತಿಂಗಳ ಹಿಂದೆ ಅಪಘಾತ ವಾಗಿದ್ದು, ಅದೇ ತಿಂಗಳಲ್ಲಿ ಅವರ ಅಪ್ಪನಿಗೂ ಕೂಡ ಅಪಘಾತ ವಾಗಿತ್ತು. ಇವರ ಮನೆಯ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು ಸದಾನಂದ ಇವರಿಗೆ 3-4ಲಕ್ಷ ದಷ್ಟು ಖರ್ಚು ಆಗಬಹುದು ಎಂದು ಡಾಕ್ಟರ್ ತಿಳಿಸಿರುತ್ತಾರೆ. ಇವರ ಕುಟುಂಬಕ್ಕೆ ತುರ್ತು ಚಿಕಿತ್ಸೆ ಗಾಗಿ ಸಾಯಿ ಮಾರ್ನಾಡ್ ತಂಡವು ಸಹಾಯಧನ ನೀಡುವ ಮೂಲಕ ಬಡ ಕುಟುಂಬದ ವ್ಯಥೆಗೆ ಸ್ಪಂದಿಸಿದೆ.
0 Comments