ಮೂಡುಬಿದಿರೆ: 76ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ
* ಯುವರಾಜ್ ಜೈನ್ ಅವರಿಗೆ
ಮೂಡುಬಿದಿರೆ ಸಮಾಜ ಮಂದಿರ ಪುರಸ್ಕಾರ ಪ್ರದಾನ
ಮೂಡುಬಿದಿರೆ : ಸಮಾಜ ಮಂದಿರ ಸಭಾ(ರಿ.) ಇದರ ವತಿಯಿಂದ ಆರಂಭಗೊಂಡು ಐದು ದಿನಗಳ ಕಾಲ ನಡೆಯುವ 76ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವಕ್ಕೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಇಂದಿನ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿ ಸ್ನೇಹಿ, ಪರೀಕ್ಷಾ ಸ್ನೇಹಿ, ಶಿಕ್ಷಕ ಸ್ನೇಹಿಯಾಗಿ ಬದಲಾಗಿರುವುದರಿಂದ ಶಿಕ್ಷಣದ ಗುಣಮಟ್ಟ ಕುಸಿದು ಶಿಸ್ತಿನ ಪರಿವೆಯೇ ಇಲ್ಲದ ಯುವಜನಾಂಗಕ್ಕೆ ಕಾರಣವಾಗುತ್ತಿದೆ. ಶಿಕ್ಷಣದಲ್ಲಿ ಸಾಹಿತ್ಯದ ಓದು, ಮಹತ್ವ ಕಳೆದುಕೊಳ್ಳಬಾರದು ಎಂದು ಹೇಳಿದರು. ಸಾಹಿತ್ಯ ಸಮ್ಮೇಳನಗಳು ಉದ್ದೇಶದಿಂದ ಹೊರತಾಗಿ ಆಡಂಬರಕ್ಕೆ ಹೆಸರಾಗಬಾರದು ಎಂದ ಅವರು ಮೂಡುಬಿದಿರೆಯ ದಸರಾ ಉತ್ಸವವನ್ನು ಸಾಹಿತ್ಯ, ಸಂಸ್ಕೃತಿಕ ಸಮ್ಮೇಳನದ ಮಾದರಿಯಲ್ಲಿ ಸಮಾಜ ಮಂದಿರ ನಡೆಸಿಕೊಂಡು ಬಂದಿರುವುದು ಅಭಿನಂದನಾರ್ಹ ಎಂದರು.
ಸಮಾಜ ಮಂದಿರ ಪುರಸ್ಕಾರ ಪ್ರದಾನ : ಸಾಧನೆಯ ಹಾದಿಯಲ್ಲಿ ರಾಷ್ಟ್ರೀಯ ಕಮಲಪತ್ರ, ರಾಜ್ಯ ಮಟ್ಟದ ಶಿಕ್ಷಣ ರತ್ನ, ಸಾಧನಶ್ರೀ ಗೌರವಗಳಿಗೆ ಭಾಜನರಾಗಿರುವ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅವರಿಗೆ 2023ನೇ ಸಾಲಿನ `ಸಮಾಜ ಮಂದಿರ ಪುರಸ್ಕಾರ'' ವನ್ನು ಪ್ರದಾನ ಮಾಡಲಾಯಿತು.
ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ
ಪುಂಡಿಕೈ ಗಣಪಯ್ಯ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಏಳೂವರೆ ದಶಕಗಳ ಪರಂಪರೆಯಿರುವ ಮೂಡುಬಿದಿರೆಯ ಈ ದಸರಾ ಉತ್ಸವದ ಸಂಚಾಲಕರಾಗಿ ೨೫ ವರ್ಷಗಳನ್ನು ಪೂರೈಸಿದ ಡಾ. ಪುಂಡಿಕಾಐ
ಗಣಪಯ್ಯ ಭಟ್ ಅವರನ್ನು ಸಮಾಜ ಮಂದಿರ ಸಭಾದ ವತಿಯಿಂದ ಸಮ್ಮಾನಿಸಲಾಯಿತು. ಪ್ರಸಕ್ತ ವರ್ಷದಲ್ಲಿ ಅವಿಭಜಿತ ದ,ಕ ಜಿಲ್ಲೆಯ ಹಲವು ಕಡೆ ಪಾಲ್ಗೊಂಡ ೧೧ ಮುದ್ದುಕೃಷ್ಣ ಸ್ಪರ್ಧೆಗಳಲ್ಲೂ ಪ್ರಥಮ ಸ್ಥಾನಿಯಾದ ಆರರ ಹರೆಯದ ಬಾಲ ಪ್ರತಿಭೆ ಆಧ್ಯಾ ವಿ.ಕೋಟ್ಯಾನ್ ಅವರಿಗೂ ಪ್ರತಿಭಾ ಪುರಸ್ಕಾರದೊಂದಿಗೆ ಗೌರವಿಸಲಾಯಿತು.
ಸಮಾಜ ಮಂದಿರ ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದ ಯುವರಾಜ್ ಜೈನ್ ಸಮಾಜಕ್ಕಾಗಿ ಬದುಕುವುದರಲ್ಲೇ ಸಾರ್ಥಕತೆಯಿದೆ. ಶಿಕ್ಷಣದಲ್ಲಿ ಶಿಸ್ತು, ಸಂಸ್ಕಾರ ಅತೀ ಅಗತ್ಯವಾಗಿದೆ ಎಂದರು.
ಮಾಜಿ ಸಚಿವ, ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು.
ದಸರಾ ಉತ್ಸವ ಸಂಚಾಲಕ ಗಣೇಶ್ ಕಾಮತ್ ಸಮ್ಮಾನಿತರ ವಿವರ ನೀಡಿದರು. ಕಾರ್ಯದರ್ಶಿ ಹೆಚ್. ಸುರೇಶ್ ಪ್ರಭು ವಂದಿಸಿದರು. ದಸರಾ ಉತ್ಸವ ಸಂಚಾಲಕ ಡಾ. ಪುಂಡಿಕÊಾ ಗಣಪಯ್ಯ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ನಾಟ್ಯ ವಿಧುಷಿ ಶ್ರೀಮತಿ ಸುಖದಾ ಬರ್ವೆ ಅವರ ಶಿಷ್ಯರಿಂದ ನೃತ್ಯ ಸಿಂಚನ ಕಾರ್ಯಕ್ರಮ ನಡೆಯಿತು
0 Comments