ಪ್ರಕಾಶ ಶೆಟ್ಟಿಗಾರ್ 2023ರ ಸಿರಿಪುರ ಪ್ರಶಸ್ತಿಗೆ ಆಯ್ಕೆ: ಡಾ.ರಾಮಕೃಷ್ಣ ಶಿರೂರು

ಜಾಹೀರಾತು/Advertisment
ಜಾಹೀರಾತು/Advertisment

 *ಪ್ರಕಾಶ ಶೆಟ್ಟಿಗಾರ್ 2023ರ ಸಿರಿಪುರ ಪ್ರಶಸ್ತಿಗೆ ಆಯ್ಕೆ: ಡಾ.ರಾಮಕೃಷ್ಣ ಶಿರೂರು*



ಮೂಡುಬಿದಿರೆ: ಸಿರಿಪುರ ಸಂಸ್ಕೃತಿಕ ಪ್ರತಿಷ್ಠಾನ ಮೂಡುಬಿದಿರೆ ಇದರ ವತಿಯಿಂದ ನೀಡುವ ಸಿರಿಪುರ ಪ್ರಶಸ್ತಿ 2023ಗೆ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯ ಸಂಸ್ಥಾಪಕ ಸಮಾಜ ಸೇವಕ, ಪ್ರಕಾಶ್ ಶೆಟ್ಟಿಗಾರ್ ಅವರನ್ನು ಆಯ್ಕೆ ಮಾಡಲಾಗಿದೆ  ಎಂದು ಎಂದು ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ.ರಾಮಕೃಷ್ಣ ಶಿರೂರು ಅವರು ತಿಳಿಸಿದ್ದಾರೆ. 

2010ರಲ್ಲಿ  ಸ್ಥಾಪನೆಯಾದ  ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸಾಂಸ್ಕೃತಿಕ ತರಬೇತಿಯನ್ನು ನೀಡುತ್ತಾ ಬಂದಿರುವ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಘಟನೆಯಾಗಿದೆ.ಕಳೆದ ಎರಡು ವರ್ಷದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಸಿರಿಪುರ ಸಂಸ್ಥೆ ನಡೆಸುತ್ತಾ ಬಂದಿದೆ. ಈ ವರ್ಷದ ಪ್ರಶಸ್ತಿ ಪ್ರಧಾನ ಸಮಾರಂಭವು ಅಕ್ಟೋಬರ್ 21 ರಂದು ಮೂಡುಬಿದಿರೆ ಪೊನ್ನೆಚಾರಿ  ಶಾರದೋತ್ಸವ ಸಮಾರಂಭದಲ್ಲಿ ನಡೆಯಲಿದೆ.

Post a Comment

0 Comments