ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ಟಿಪ್ಪರ್, ಲಾರಿಯನ್ನು ವಶಕ್ಕೆ ಪಡೆದ ಬಜ್ಪೆ ಪೊಲೀಸರು

ಜಾಹೀರಾತು/Advertisment
ಜಾಹೀರಾತು/Advertisment

 ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ಟಿಪ್ಪರ್,  ಲಾರಿಯನ್ನು ವಶಕ್ಕೆ ಪಡೆದ ಬಜ್ಪೆ ಪೊಲೀಸರು



ಮೂಡುಬಿದಿರೆ: ಮಂಗಳೂರು ತಾಲೂಕು ಮೂಳೂರು ಗ್ರಾಮದ ಗುರುಪುರ ಎಂಬಲ್ಲಿ  ಅಕ್ರಮ ಗಣಿಗಾರಿಗೆ ನಡೆಸಿ ಯಾವುದೇ ಪರವಾಣಿಗೆ ಇಲ್ಲದೆ ಮರಳನ್ನು ಟಿಪ್ಪರ್ ಲಾರಿಗಳಲ್ಲಿ ತುಂಬಿಸಿ ಸಾಗಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬಜ್ಪೆ ಪೊಲೀಸರು ಟಿಪ್ಪರ್ ಮತ್ತು ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪತ್ತೆ ಮಾಡಲಾಗಿರುತ್ತದೆ. ಅಕ್ರಮವಾಗಿ ಮರಳು ತುಂಬಿಸಿ ಸಾಗಾಟ ನಡೆಸಲು ಉಪಯೋಗಿಸಿರುವ ತಲಾ  5 ಲಕ್ಷ ರೂಪಾಯಿ ಮೌಲ್ಯದ ಮರಳು ತುಂಬಿರುವ KA 19 AB 2205 ಮತ್ತು KA 04 C 6407 ನೇ ನಂಬ್ರದ 2 ಟಿಪ್ಪರ್ ಲಾರಿಗಳನ್ನು ಸ್ವಾಧೀನಪಡಿಸಿಕೊಂಡಿದ್ದು, ಈ ಬಗ್ಗೆ ಆರೋಪಿತರುಗಳ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಂಗಳೂರು ನಗರ ಪೊಲೀಸ್‌ ಆಯುಕ್ತ ಅನುಪಮ್ ಅಗರವಾಲ್,  ಡಿ.ಸಿ.ಪಿ. ಸಿದ್ದಾರ್ಥ ಗೋಯೆಲ್ ಮತ್ತು ಡಿ.ಸಿ.ಪಿ ಕ್ರೈಂ ವಿಭಾಗದ ದಿನೇಶ್ ಕುಮಾರ್ ರವರ ಮಾರ್ಗದರ್ಶನದಂತೆ,  ಪಣಂಬೂರು ಎಸಿಪಿ  ಮನೋಜ್ ಕುಮಾರ್ ರವರ ನಿರ್ದೇಶನದಂತೆ  ಬಜ್ಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸಂದೀಪ್ ರವರ ನೇತೃತ್ವದಲ್ಲಿ ಪಿಎಸ್ ಐಗಳಾದ ಗುರಪ್ಪ ಕಾಂತಿ, ರೇವಣ್ಣ ಸಿದ್ದಪ್ಪ ಹಾಗೂ  ಸಿಬ್ಬಂದಿಗಳು ಬುಧವಾರ ರಾತ್ರಿ ಕಾರ್ಯಚರಣೆ ನಡೆಸಿದ್ದರು.

Post a Comment

0 Comments