ಮೂಡುಬಿದಿರೆಯಲ್ಲಿ ನಾಳೆ ವಾಹನ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ

 ಮೂಡುಬಿದಿರೆಯಲ್ಲಿ ನಾಳೆ ವಾಹನ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ



ಮೂಡುಬಿದಿರೆಯ ಸಾರ್ವಜನಿಕ ಶ್ರೀ ಗಣೇಶೋತ್ಸವದ ಕೊನೆಯ ದಿನವಾಗಿರುವ ನಾಳೆ (ಶನಿವಾರ) ವಾಹನಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ ಎಂದು ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

   ಮಧ್ಯಾಹ್ನ 12. ಗಂಟೆಯಿಂದ ಗಣೇಶ ವಿಸರ್ಜನೆ ಆಗುವವರೆಗೆ ಮೂಡುಬಿದಿರೆ ಪೇಟೆಯಲ್ಲಿ  ವಾಹನಗಳ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು ಮಾಡಲಾಗಿದ್ದು ನಾಳೆ ವಾಹನಗಳು ಈ ಕೆಳಗೆ ಸೂಚಿಸಿದಂತೆ ಸಂಚರಿಸಬೇಕಾಗಿದೆ.

* ಬೆಳ್ತಂಗಡಿ ಕಡೆಯಿಂದ ಕಾರ್ಕಳ ಕಡೆ ಸಂಚರಿಸುವ ವಾಹನಗಳು ಮಹಾವೀರ ಕಾಲೇಜು ಬಳಿ ಬಲಕ್ಕೆ ತಿರುಗಿ ಕೋಟೆಬಾಗಿಲಿನಿಂದಾಗಿ ಸುಭಾಸ್ ನಗರ ದ್ವಾರದ ಬಳಿ ಬಲಕ್ಕೆ ತಿರುಗಿ ಅಮನೊಟ್ಟು ಕ್ರಾಸ್ ರಸ್ತೆ ಮೂಲಕ ಸಂಚರಿಸುವುದು.

* ಬಂಟ್ವಾಳ ಕಡೆಯಿಂದ ಕಾರ್ಕಳ ಕಡೆಗೆ ಸಂಚರಿಸುವ ವಾಹನಗಳು ಕೀರ್ತಿ ನಗರ ಜಂಕ್ಷನ್ ನಿಂದ ಮಹಾವೀರ ಕಾಲೇಜು ಬಳಿ ಬಲಕ್ಕೆ ತಿರುಗಿ ಕೋಟೆಬಾಗಿಲುನಿಂದಾಗಿ ಸಭಾಸ್ ನಗರ ದ್ವಾರದ ಬಳಿ ಬಲಕ್ಕೆ ತಿರುಗಿ ಅಮನೊಟ್ಟು ಕ್ರಾಸ್ ರಸ್ತೆ  ಮೂಲಕ  ಸಂಚರಿಸುವುದು.

* ಶಿರ್ತಾಡಿ ಕಡೆಯಿಂದ ಮಂಗಳೂರು- ಮೂಲ್ಕಿ ಕಡೆ ಹೋಗುವ ವಾಹನಗಳು ಜೈನ್ ಪೇಟೆಯಿಂದ ಅಲಂಗಾರು ಮಾರ್ಗವಾಗಿ ರಿಂಗ್ ರೋಡ್ ಮುಖಾಂತರ ತೆರಳುವುದು.

* ಕಾರ್ಕಳ ಕಡೆಯಿಂದ ಬೆಳ್ತಂಗಡಿ ಮತ್ತು ಬಿ.ಸಿ.ರೋಡ್ ಕಡೆಗೆ ಹೋಗುವ ವಾಹನಗಳು ಜೈನ್ ಪೇಟೆ ಕ್ರಾಸ್ ರಸ್ತೆ ಮೂಲಕ ಕೋಟೆಬಾಗಿಲು ಕೊಡಂಗಲ್ಲು ಜಂಕ್ಷನ್ ರಸ್ತೆ ಮೂಲಕ ಸಂಚರಿಸುವುದು.

* ಕಾರ್ಕಳ ಕಡೆಯಿಂದ ಮಂಗಳೂರು, ಮೂಲ್ಕಿ ಕಡೆಗೆ ಹೋಗುವ ವಾಹನಗಳು ಅಲಂಗಾರು ಜಂಕ್ಷನ್ ಬಳಿ ಬಲಕ್ಕೆ ತಿರುಗಿ ರಿಂಗ್ ರೋಡ್ ರಸ್ತೆಯಲ್ಲಿ ಸಂಚರಿಸುವುದು.

* ಹಳೆ ಪೊಲೀಸ್ ಠಾಣೆಯಿಂದ ನಿಶ್ಮಿತಾ ಸರ್ಕಲ್ ವರೆಗೆ ಮುಖ್ಯ ರಸ್ತೆಯಲ್ಲಿ ಮೇಲ್ಕಂಡ ಅವಧಿಯಲ್ಲಿ ಸಂಚಾರ ನಿಷೇಧಿಸಲಾಗಿದೆ.

* ಮಂಗಳೂರು ಕಡೆಯಿಂದ ಕಾರ್ಕಳ ಕೊಡ್ಯಡ್ಕ ಕಡೆಗೆ ಹೋಗುವ ವಾಹನಗಳು ಸ್ವರಾಜ್ಯ ಮೈದಾನ, ರಿಂಗ್ ರೋಡ್ ನಲ್ಲಿ ಸಂಚರಿಸಿ ಅಲಂಗಾರು ಜಂಕ್ಷನ್ ಮೂಲಕ ಸಂಚರಿಸುವುದು.

* ಏಕಮುಖ ರಸ್ತೆಯಾಗಿರುವ ಅಮರಶ್ರೀ ಟಾಕೀಸು ರಸ್ತೆಯನ್ನು ಮೇಲ್ಕಂಡ ಅವಧಿಗೆ ದ್ವಿಮುಖ ರಸ್ತೆಯಾಗಿ ಮಾರ್ಪಾಡು ಮಾಡಲಾಗಿದೆ.

* ಮಂಗಳೂರಿನಿಂದ ಮೂಡುಬಿದಿರೆ ಕಡೆಗೆ ಬರುವ ವಾಹನಗಳು ವಿದ್ಯಾಗಿರಿಯ ಮಾಸ್ತಿಕಟ್ಟೆ ಕ್ರಾಸ್ ರಸ್ತೆ ಮಾರ್ಗವಾಗಿ ಲಾವಂತಬೆಟ್ಟು ರಸ್ತೆಯಲ್ಲಿ ಸಂಚರಿಸುವುದು.

* ಗಣೇಶೋತ್ಸವಕ್ಕೆ ಆಗಮಿಸುವ ಭಕ್ತಾದಿಗಳ ವಾಹನಗಳಿಗೆ ತಾಲೂಕು ಆಫೀಸ್ ಮುಂಭಾಗದ ಗ್ರೌಂಡನ್ನು ತಾತ್ಕಾಲಿಕ ಪಾರ್ಕಿಂಗ್ ಸ್ಥಳವಾಗಿ ಕಲ್ಪಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Post a Comment

0 Comments

Advertisement