ಮೂಡುಬಿದಿರೆಯ ಗಣಪನಿಗೆ ಬೆಳ್ಳಿಯ ಕಬ್ಬು ಹಾಗೂ ಚಾಮರ ಸಮರ್ಪಿಸಿದ ಸರ್ವೋದಯ ಫ್ರೆಂಡ್ಸ್ ಬೆದ್ರ
ಮೂಡುಬಿದಿರೆ: ಸಾಮಾಜಿಕ ಧಾರ್ಮಿಕ ಸೇವಾ ಮನೋಭಾವನೆಯಿಂದ ಹುಟ್ಟಿಕೊಂಡಿರುವ ಸರ್ವೋದಯ ಫ್ರೆಂಡ್ಸ್ ಮೂಡುಬಿದಿರೆ ಇದರ ಹದಿನೈದನೇ ವರ್ಷದ ಸಂಭ್ರಮಾಚರಣೆಯಲ್ಲಿದ್ದು ಇದು ಮೂಡಬಿದ್ರೆಯ 60ನೇ ವರ್ಷದ ಸಂಭ್ರಮದಲ್ಲಿರುವ ಮೂಡುಬಿದ್ರೆಯ ಗಣಪನಿಗೆ ಬೆಳ್ಳಿಯ ಕಬ್ಬು ಹಾಗೂ ಒಂದು ಜೊತೆ ಚಾಮರವನ್ನು ಸಮರ್ಪಿಸುವ ಮೂಲಕ ವಜ್ರ ಮಹೋತ್ಸವದ ಸಮರ್ಪಣಾ ಭಾವನೆಯೊಂದಿಗೆ ಭಾಗಿಯಾಗುವ ಮೂಲಕ ಗಮನ ಸೆಳೆದಿದೆ.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಗುರು ದೇವಾಡಿಗ, ಸಮಿತಿಯ ಗುರು ಅಂಚನ್, ಪ್ರಕಾಶ್ ಕುಂದರ್ ,ದಿವ್ಯ ವರ್ಮ ಬಲ್ಲಾಳ್, ಭವಿಷ್ಯತ್ ಕೋಟ್ಯಾನ್, ಚೇತನ್ ಪೇಟೆ ಮನೆ ,ರಂಜನ್ ರೈ ವಿಜೇತ್ ಆಚಾರ್ಯ ಅಕ್ಷಯ ಜೈನ್, ಹರೀಶ್ ಮೈದಾನ ಮನೋಹರ ದೀಪಕ್ ಕೊಲ್ಕೆ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.
0 Comments