ಪುಸ್ತಕ ಆಯ್ಕೆ ರಾಜ್ಯ ಸಮಿತಿಗೆ ಡಾ.ಧನಂಜಯ ಕುಂಬ್ಳೆಆಯ್ಕೆ

ಜಾಹೀರಾತು/Advertisment
ಜಾಹೀರಾತು/Advertisment

 ಪುಸ್ತಕ ಆಯ್ಕೆ ರಾಜ್ಯ ಸಮಿತಿಗೆ ಡಾ.ಧನಂಜಯ ಕುಂಬ್ಳೆಆಯ್ಕೆ



  ಮೂಡುಬಿದಿರೆ: ಕರ್ನಾಟಕ ಸರಕಾರವು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಪುಸ್ತಕ ಆಯ್ಕೆ ಸಮಿತಿಯನ್ನು ಪುನರ್ ರಚಿಸಿದ್ದು, ಪ್ರೊ.ಕರೀಗೌಡ ಬೀಚನಹಳ್ಳಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಸಮಿತಿಯಲ್ಲಿ ಮೈಸೂರು ಕಂದಾಯ ವಿಭಾಗದಿಂದ ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ, ಪ್ರಸಾರಾಂಗದ ಸಹ ನಿರ್ದೇಶಕ ಡಾ.ಧನಂಜಯ ಕುಂಬೈ ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ.

   ಭಕ್ತರಹಳ್ಳಿ ಕಾಮರಾಜ್‌, ಡಾ.ಯಲ್ಲಪ್ಪ, ಬಿ.ಹಿಮ್ಮಡಿ, ಸಿದ್ದರಾಮ ಹೊನ್ನಲ್, ಭದ್ರಾವತಿ ರಾಮಾಚಾರಿ, ಪ್ರೊ.ಎನ್.ಕೆ.ಲೋಲಾಕ್ಷಿ, ಮುಕ್ತಾಝ್ ಬೇಗಂ, ಕಿಗ್ಗ ರಾಜಶೇಖರ್,ಎಚ್.ಜಿ. ರಾಜೇಶ್, ಕಿಶನ್ ರಾವ್ ಕುಲಕರ್ಣಿ, ಬಿ.ರಮೇಶ್ ಇತರ ಸದಸ್ಯರಾಗಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಪ್ರಕಾಶಕರ ಸಂಘ, ಕರ್ನಾಟಕ ವಿಜ್ಞಾನ ಪರಿಷತ್‌, ಕರ್ನಾಟಕ ಗ್ರಂಥಾಲಯ ಸಂಘ, ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ, ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರು, ಮೈಸೂರು ವಿವಿ ಪ್ರಸಾರಾಂಗದ ನಿರ್ದೇಶಕರು ಸಮಿತಿಯ ಪದನಿಮಿತ್ತ ಸದಸ್ಯರಾಗಿರುತ್ತಾರೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್ ಕುಮಾರ್ ಎಸ್. ಹೊಸಮನಿ ಸದಸ್ಯ ಕಾರ್ಯದರ್ಶಿಯಾಗಿದ್ದು, ಸಮಿತಿಯು ಎರಡು ವರ್ಷಗಳ ಅವಧಿಯನ್ನು ಹೊಂದಿರುತ್ತದೆ ಎಂದು ಸರಕಾರದ ಆದೇಶದಲ್ಲಿ ತಿಳಿಸಲಾಗಿದೆ.

Post a Comment

0 Comments