ಮೂಡುಬಿದಿರೆ ಶ್ರಿಗಳ ಪಟ್ಟಾಭಿಷೇಕಕ್ಕೆ ೨೫ ರ ಸಂಭ್ರಮ : ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

ಜಾಹೀರಾತು/Advertisment
ಜಾಹೀರಾತು/Advertisment
ಮೂಡುಬಿದಿರೆ ಶ್ರಿಗಳ ಪಟ್ಟಾಭಿಷೇಕಕ್ಕೆ ೨೫ ರ ಸಂಭ್ರಮ : ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ




 
ಮೂಡುಬಿದಿರೆ:  ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರಿಗೆ  ಪಟ್ಟಾಭಿಷೇಕವಾಗಿ ೨೫ನೇ ವರ್ಷ ತುಂಬುವ ಈ  ಹಿನ್ನಲೆಯಲ್ಲಿ ಹಲವು ಅಭಿವೃದ್ಧಿ  ಕಾರ್ಯಕ್ರಮಗಳನ್ನು ಜೈನ ಮಠವು ಯೋಜನೆ ರೂಪಿಸಿದ್ದು ಇದಕ್ಕೆ ಸ್ವಾಮೀಜಿ ಅವರು ರಮಾರಾಣಿ ಶೋಧ ಸಂಸ್ಥಾನ ಭಟ್ಟಾರಕ ಸಭಾಭವನದಲ್ಲಿ  ಶನಿವಾರ ಚಾಲನೆಯನ್ನು ನೀಡಿದರು.
ನಂತರ ಆಶೀರ್ವಚನ ನೀಡಿದ  ಆಧ್ಯಾತ್ಮ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಪ್ರಕೃತಿಯನ್ನು ಉಳಿಸಿ, ಬೆಳೆಸುವಂತಹ ಕೈಂಕರ್ಯಕ್ಕೂ ಮಠ ತನ್ನದೇ ಕೊಡುಗೆ ನೀಡುತ್ತಿದೆ. ವ್ಯಕ್ತಿಯ ವ್ಯಕ್ತಿತ್ವದೊಡನೆ ಪ್ರಕೃತಿಯ ಜಾಗೃತಿ ಇದ್ದಾಗ ಜೀವನ ಸುಖ, ನೆಮ್ಮದಿಯಿಂದಿರುತ್ತದೆ ಎಂದರು.


 
  ಶ್ರೇಷ್ಠ ಮಠವಾಗಿರುವ ಮೂಡುಬಿದಿರೆಯಲ್ಲಿ  ಇತಿಹಾಸಕ್ಕೆ ಸಂಬಂಧಪಟ್ಟಂತಹ ಕೆಲಸಗಳನ್ನು ನಿರಂತವಾಗಿ 24 ವರ್ಷಗಳಿಂದ ಮಾಡುತ್ತಿದೇವೆ.ತಾಮ್ರ ಶಾಸನಗಳು ಅಪೂರ್ವವಾದಂತಹ 50 ಇಲ್ಲಿವೆ. ರಜತಪತ್ರ, ಸ್ವರ್ಣಪತ್ರಗಳಿದ್ದು ಅವುಗಳನ್ನು ಜತನದಿಂದ ಸಂರಕ್ಷಿಸುವ ಕೆಲಸವಾಗಿದೆ. ಸಂಸ್ಕೃತ, ಪಾಕೃತ, ಕನ್ನಡ, ತುಳು ಭಾಷೆಗಳಿಗೆಗಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ. ಅತಿಥಿಗೃಹ ಜೀರ್ಣೋದ್ಧಾರ ಕಾರ್ಯ, ವೈದ್ಯಕೀಯ ಶಿಬಿರ, ಕೆರೆಗಳಿಗೆ ಕಾಯಕಲ್ಪ ತಾಳೆಗರಿ ನೆಡುವ ಅಭಿಯಾನಗಳಾಗಿವೆ. ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಸಂಶೋಧನಾ ಗ್ರಂಥ, ಮಾಹಿತಿ ನೀಡುವ ಕೆಲಸವನ್ನು ಶ್ರೀಮಠದಲ್ಲಿ ಮಾಡುತ್ತಾ ಬರುತ್ತಿದ್ದೇವೆ. ಗ್ರಾಮೀಣ ಪ್ರದೇಶಗಳಿಗೆ ಸಂಚಾರಿ ಗ್ರಂಥಾಲಯ, ಗ್ರಂಥ ಭಂಡಾರ ಸ್ಥಾಪಿಸುವ ಸಂಕಲ್ಪ ಮಾಡಿದ್ದೇವೆ. ಪಾಕೃತ ಭಾಷಾ ಕಾರ್ಯಾಗಾರ, ತಾಳೆಗರಿಗಳನ್ನು ಓದುವ ಕಾರ್ಯಾಗಾರಗಳನ್ನು ವಿದ್ಯಾರ್ಥಿಗಳಿಗೆ ನಡೆಸಿಕೊಂಡು ಬರುತ್ತಿದ್ದೇವೆ  ಎಂದರು. 

ತಾಳ್ತಾಜೆ ವಸಂತ ಕುಮಾರ್ ಅವರು "ಆದಿ ಪುರಾಣ" ಮತ್ತು ವಿಕ್ರಮಾರ್ಜುನ ವಿಜಯ" ಎಂಬ ಎರಡು ಕಾವ್ಯಗಳ ಬಗ್ಗೆ ಉಪನ್ಯಾಸ ನೀಡಿ, ಕವಿ ಪಂಪ ಒಂದು ಸಮಾಜಕ್ಕೆ ಸೀಮಿತವಾಗದೆ ಇಡೀ ಜಗತ್ತಿಗೆ ಅವನ ಮೌಖಿಕ ಸಿದ್ಧಾಂತಗಳನ್ನು ಉತ್ತಮಪಡಿಸಿ ಬದುಕಿಗೆ ಬೇಕಾಗಿರುವ ಮಾರ್ಗದರ್ಶನವನ್ನು ತನ್ನ ಕಾವ್ಯಗಳ ಮೂಲಕ ನೀಡಿದ್ದಾನೆ. ಅದೇ ರೀತಿ ಬದುಕನ್ನು ಹೇಗೆ ಸುಂದರಗೊಳಿಸಬೇಕೆಂಬುದರ ಬಗ್ಗೆ ಈ ಕಾವ್ಯಗಳು ನಮಗೆ ತೋರಿಸಿಕೊಡುತ್ತವೆ ಎಂದರು. 

ದ.ಕ.ಜಿ.ಪಂ.ಸಾಹಿತ್ಯ ಪರಿಷತ್ ನ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.  ಕೊಪ್ಪಳ ಜಿಲ್ಲೆಯ ತಾವರಗೇರಿ ಮಠದ ಮಹೇಶ್ವರ ಸ್ವಾಮೀಜಿ, ಇತಿಹಾಸ ತಜ್ಞ ಪುಂಡಿಕೈ ಗಣಪಯ್ಯ ಭಟ್ ಬಸದಿಗಳ ಮೊಕ್ತೇಸರರಾದ ಪಟ್ನಶೆಟ್ಟಿ ಸುಧೇಶ್ ಕುಮಾರ್,  ಮಠದ ವ್ಯವಸ್ಥಾಪಕರಾದ ಸಂಜಯಂತ ಕುಮಾರ್ ಉಪಸ್ಥಿತರಿದ್ದರು.
 
 ನೇಮಿರಾಜ್ ಶೆಟ್ಟಿ ಸ್ವಾಗತಿಸಿದರು. ಸಾಹಿತಿ ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Post a Comment

0 Comments