*ಪುತ್ತಿಗೆ ಪಂಚಾಯತ್ ಅಧ್ಯಕ್ಷರಿಗೆ ಅಭಿನಂದನೆ.*
ಇಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹಂಡೇಲು ಇಲ್ಲಿ ಸರ್ಕಾರದ ವತಿಯಿಂದ ನೀಡಲಾಗುವ ಉಚಿತ ಪಾದರಕ್ಷೆಗಳ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು
SDMC ಅಧ್ಯಕ್ಷರು ಶ್ರೀಮತಿ ವೀರಾ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಪುತ್ತಿಗೆ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವಂತ ಕು. ರಾಧಾ ರವರನ್ನು ಶಾಲೆಯ ವತಿಯಿಂದ ಮುಖ್ಯ ಶಿಕ್ಷಕರಾದ ಶ್ರೀಮತಿ ಚಂದ್ರಕಾಂತಿ ರವರು ಅಭಿನಂದಿಸಿದರು. ಹಾಗೂ ಮಕ್ಕಳಿಗೆ ಸರ್ಕಾರದ ವತಿಯಿಂದ ಕೊಡಲ್ಪಟ್ಟ ಉಚಿತ ಪಾದರಕ್ಷೆಗಳನ್ನು ಪಂಚಾಯತ್ ಸದಸ್ಯರಾದ ಮುರುಳಿಧರ ಕೋಟ್ಯಾನ್ ವಿತರಿಸಿದರು. ಕಾರ್ಯಕ್ರಮದಲ್ಲಿ ಸಹಶಿಕ್ಷಕಿ ಚಿತ್ರಾವತಿ, ಗೌರವ ಶಿಕ್ಷಕಿ ಶ್ರೀಮತಿ ಚಂದ್ರಿಕಾ, ಕು.ರಕ್ಷಿತಾ ಉಪಸ್ಥಿತರಿದ್ದರು. ಪದವೀಧರ ಪ್ರಾಥಮಿಕ ಶಿಕ್ಷಕ ಡಾ. ದೊರೆಸ್ವಾಮಿ ಕೆ.ಎನ್. ರವರು ಸ್ವಾಗತಿಸಿ ವಂದಿಸಿದರು.
0 Comments