ಪಡುಮಾರ್ನಾಡಿನಲ್ಲಿ ಪೋಷಣ್ ಮಾಸಾಚರಣೆ
ಮೂಡುಬಿದಿರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು (ಗ್ರಾ), ಪಡುಮಾರ್ನಾಡು ಗ್ರಾಮ ಪಂಚಾಯತ್, ಮೂಡುಮಾರ್ನಾಡು ಅಂಗನವಾಡಿ ಬಾಲವಿಕಾಸ ಸಮಿತಿ, ಶ್ರೀರಕ್ಷಾ ಸ್ತ್ರೀಶಕ್ತಿ ಗೊಂಚಲು ಇವುಗಳ ಜಂಟಿ ಆಶ್ರಯದಲ್ಲಿ ಬೆಳುವಾಯಿ ವಲಯದ
ಮೂಡುಮಾರ್ನಾಡು ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ, ಯೋಗಾಭ್ಯಾಸ, ಇಂದ್ರಧನುಷ್ ಕಾರ್ಯಕ್ರಮ ನಡೆಯಿತು.
ಪಡುಮಾರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಾಸುದೇವ ಭಟ್ ಸಭೆಯ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪೌಷ್ಠಿಕಾಂಶಯುಕ್ತ ಆಹಾರವನ್ನು ಯಾವುದೇ ರಾಸಾಯನಿಕ ಬಳಸದೆ ಸಾವಯವ ಗೊಬ್ಬರದಲ್ಲಿ ಮನೆಯಲ್ಲಿಯೇ ಸೊಪ್ಪು, ತರಕಾರಿ ಬೆಳೆಸಿ ಮಕ್ಕಳ ಹಿರಿಯರ ಕುಟುಂಬದ ಆರೋಗ್ಯ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮದಲಿ ಪಂಚಾಯತ್ ಪಿಡಿಓ ಉಗ್ಗಪ್ಪ ಮೂಲ್ಯ ಮಾತನಾಡಿ ಇಂತಹ ಕಾರ್ಯಕ್ರಮ ಬಹಳ ಮುಖ್ಯ. ಗರ್ಭದಲ್ಲಿಯೇ ಮಕ್ಕಳ ಆರೋಗ್ಯ ನೋಡಿಕೊಂಡರೆ ಸಮಾಜಕ್ಕೆ ಉತ್ತಮ ಪ್ರಜೆ ನೀಡಬಹುದು ಎಂದು ಹೇಳಿದರು. ಬೆಳುವಾಯಿ ಮೇಲ್ವಿಚಾರಕಿ ರತಿ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಪೌಷ್ಠಿಕ ಆಹಾರ ಸೇವನೆಯ ಅಗತ್ಯತೆ ಹಾಗೂ ಪ್ರಯೋಜನದ ಬಗ್ಗೆ ತಿಳಿಸಿದರು. ಉಪಾಧ್ಯಕ್ಷೆ ಸಂಪಾ ಉಪಸ್ಥಿತರಿದ್ದರು.
ಮೂಡುಮಾರ್ನಾಡು ವಾರ್ಡಿನ ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರು, ಬಾಲವಿಕಾಸ ಸಮಿತಿಯ ಅಧ್ಯಕ್ಷೆ, ಪದಾಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು, ಶ್ರೀರಕ್ಷಾ ಗೊಂಚಲಿನ ಎಲ್ಲಾ ಪದಾಧಿಕಾರಿಗಳು, ಗ್ರಾಮದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು, ರೂಪಶ್ರೀ, ದೀಪಾಶ್ರೀ ಸ್ತ್ರೀಶಕ್ತಿ ಗುಂಪಿನ ಸದಸ್ಯರು, ಗರ್ಭಿಣಿಯರು, ಮಕ್ಕಳ ಪೋಷಕರು ಈ ಸಂದರ್ಭದಲ್ಲಿದ್ದರು.
ಸ್ತೀಶಕ್ತಿ ಸದಸ್ಯೆ ಶಶಿಕಲಾ ಪ್ರಾರ್ಥಿಸಿದರು. ಸುಮತಿ ಕೆ.ಟಿ. ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಕುಶಲ ಕಾರ್ಯಕ್ರಮ ನಿರೂಪಿಸಿದರು. ಆಶಾ ಕಾರ್ಯಕರ್ತೆ ಸುಮತಿ ಎಸ್. ಧನ್ಯವಾದವಿತ್ತರು.
SMS
Copy Link
Share
0 Comments