ಜೇಸಿ ಸಪ್ತಾಹ 2023-ಚೈತ್ರ ಸಮಾರೋಪ
ಪ್ರಭಾತ್ ಬಲ್ನಾಡು ಮತ್ತು ಮಾಕ್ ೯ ಮೆಂಡೋನ್ಸಾರಿಗೆ ಕಮಲಪತ್ರ ಪ್ರದಾನ
ಮೂಡುಬಿದಿರೆ :ಜೇಸಿಐ ಮೂಡುಬಿದಿರೆ ತ್ರಿಭುವನ್ ಇದರ ವತಿಯಿಂದ ಜೇಸಿ ಸಪ್ತಾಹದಂಗವಾಗಿ 7 ದಿನಗಳ ಕಾಲ ನಡೆದ ವಿವಿಧ ಕಾರ್ಯಗಳು ಶುಕ್ರವಾರ ನಿಶ್ಮಿತಾ ಟವರ್ಸ್ ನ ಪ್ಯಾರಾಡೈಸ್ ಹಾಲ್ ನಲ್ಲಿ ಸಮಾರೋಪ ಗೊಂಡಿತು.
ಜೇಸಿಐ ಅಧ್ಯಕ್ಷ ಸುನೀಲ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೇಸಿ ಪ್ರಭಾತ್ ಬಲ್ನಾಡು ಮತ್ತು ಮಾರ್ಕ್ ಮೆಂಡೊನ್ಸಾ ಇವರಿಗೆ ಕಮಲ ಪತ್ರ ನೀಡಿ ಗೌರವಿಸಲಾಯಿತು.
ರೋಟರಿ ಕ್ಲಬ್ ನ ಅಧ್ಯಕ್ಷ ನಾಗರಾಜ ಬಿ.ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಜೇಸಿ ಸಂಸ್ಥೆಯು ಉತ್ತಮ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ಅರ್ಹ ವ್ಯಕ್ತಿ ಮತ್ತು ಸಂಸ್ಥೆಗಳನ್ನು ಗುರುತಿಸಿ ಗೌರವಿಸುವ ಮೂಲಕ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಸಂಸ್ಥೆಯೂ ಮುಂದೆಯೂ ತರಬೇತಿಗಳನ್ನು ನೀಡುವ ಮೂಲಕ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡುವಂತ್ತಾಗಲಿ ಎಂದು ಶುಭ ಹಾರೈಸಿದರು.
ಜೇಸಿಯ ಪೂರ್ವಾಧ್ಯಕ್ಷ ಅಬುಲ್ ಅಲಾ ಪುತ್ತಿಗೆ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಯುವ ಜನಾಂಗವು ಇಂದು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇಂತಹ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಸರಿದಾರಿಗೆ ತರುವಂತಹ ಕೆಲಸಗಳಾಗಬೇಕಿದೆ. ಜೇಸಿ ಸಂಸ್ಥೆ ನಮಗೇನು ನೀಡಿದೆ ಎನ್ನುವುದಕ್ಕಿಂತಲೂ ನಾವು ನಮ್ಮನ್ನು ಅದರಲ್ಲಿ ಯಾವ ರೀತಿ ತೊಡಗಿಸಿಕೊಂಡಿದ್ದೇವೆ ಎನ್ನುವುದು ಮುಖ್ಯ. ನಾವು ಸಂಪೂರ್ಣವಾಗಿ ಅದರಲ್ಲಿ ತೊಡಗಿಸಿಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಲು ಸಾಧ್ಯವಿದೆ ಎಂದರು.
ಸಾಧಕರಿಗೆ ಸನ್ಮಾನ :
ಶಿಕ್ಷಣ ಕ್ಷೇತ್ರದಲ್ಲಿ ಯಶೋಧ,
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೀತಾರಾಮ ಆಚಾರ್ಯ,
ಸಮಾಜ ಸೇವೆಯಲ್ಲಿ ಪುರಂದರ ಆರ್. ದೇವಾಡಿಗ,
ತುಳು ರಂಗಭೂಮಿ ಕ್ಷೇತ್ರದಲ್ಲಿ ಶ್ರೀ ಉಮೇಶ್ ಮಿಜಾರ್ ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಗೌರವ : ಸಮಾಜ ಸೇವಾ ಕಾರ್ಯಕ್ರಮಗಳನ್ನು ಗುರುತಿಸಿ ವೇಣೂರು ಕ್ರಿಸ್ತರಾಜ ನವಚೇತನ ಸ್ಕೂಲ್,
ಪವರ್ ಫ್ರೆಂಡ್ಸ್ ಬೆದ್ರ,
ನವಚೇತನ ಸೇವಾ ಬಳಗ(ರಿ.) ತೋಡಾರು, ಮೂಡುಬಿದಿರೆ
ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ ಸಂಸ್ಥೆಯನ್ನು ಗೌರವಿಸಲಾಯಿತು.
ಜೇಸಿ ಶ್ರವಣ್ ಮತ್ತು ಜೇಸಿ ಫರಾಜ್ ಬೆದ್ರ ಅವರಿಗೆ ಘಟಕದ ವತಿಯಿಂದ 'ಕ್ರಿಯಾಶೀಲ ಯುವ ವ್ಯಕ್ತಿ' ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಜೇಸಿ ಅನಂತವೀರ್ ಜೈನ್, ರೋಟರಿ ಕ್ಲಬ್
ನ ಮಾಜಿ ಅಧ್ಯಕ್ಷ ಮಹಮ್ಮದ್ ಆರೀಫ್, ಐಪಿಪಿ ಶಾಂತಲಾ ಎಸ್.ಆಚಾರ್ಯ, ಮಹಿಳಾ ಜೇಸಿ ಸಂಯೋಜಕಿ ಮಲ್ಲಿಕಾ ಉಪಸ್ಥಿತರಿದ್ದರು.
ಅಧ್ಯಕ್ಷ ಸುನಿಲ್ ಸ್ವಾಗತಿಸಿದರು. ಮಾಕ್ ೯ಮಡೋನ್ಸಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಆಶ್ರಿತಾ ಎಸ್.ಶೆಟ್ಟಿ ವಂದಿಸಿದರು.
0 Comments