ಬೆಳುವಾಯಿ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ

ಜಾಹೀರಾತು/Advertisment
ಜಾಹೀರಾತು/Advertisment

 ಬೆಳುವಾಯಿ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ




ಮೂಡುಬಿದಿರೆ: ದ.ಕ. ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ಇವುಗಳ  ಆಶ್ರಯದಲ್ಲಿ ಬೆಳುವಾಯಿ ವಲಯದ ಮುಗೇರಕಳ ಅಂಗನವಾಡಿ ಕೇಂದ್ರದಲ್ಲಿ ಷೋಷಣ್ ಮಾಸಚಾರಣೆ ಅಂಗವಾಗಿ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮ ನಡೆಯಿತು.

  ಪಡುಮಾರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ  ವಾಸುದೇವ ಭಟ್‌ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಾಲ ವಿಕಾಸ ಸಲಹಾ ಸಮಿತಿ ಅಧ್ಯಕ್ಷೆ ಆಶಾ ಅವರು ಸಭೆಯ ಅಧ್ಯಕ್ಷತೆಯನ್ನು  ವಹಿಸಿದ್ದರು.  ಬೆಳುವಾಯಿ ವಲಯದ ಮೇಲ್ವಿಚಾರಕಿ  ರತಿ ಶೆಟ್ಟಿ ಇವರು  ಷೋಷಣ್ ಮಾಸಚಾರಣೆ 

ಹಾಗೂ ಪೌಷ್ಟಿಕ ಆಹಾರದ ಬಗ್ಗೆ  ಮಾಹಿತಿ ನೀಡಿದರು.

ಗ್ರಾಮ ಪಂಚಾಯತ್ ಸದಸ್ಯ ಯಶೋಧ ನಾಯಕ್ , ಸಮುದಾಯ ಆರೋಗ್ಯ ಅಧಿಕಾರಿ ಸಂತೋಷ್, ಜಿ.ಪ.ಹಿ.ಪ್ರಾ ಶಾಲೆ ಮೂಡುಮಾರ್ನಾಡು  ಮುಖ್ಯ ಶಿಕ್ಷಕಿ ಜ್ಯೋತಿ ಡಿ'ಸೋಜಾ,  ಮಂಜುಶ್ರೀ ಭಜನಾ ಮಂಡಳಿಯ ಗೌರವಧ್ಯಕ್ಷ ನೀಲಯ್ಯ ಭಂಡಾರಿ, ಕಾರ್ಯಕರ್ತೆ ಸುಮತಿ ಸಂಜೀವಿನಿ ಯೋಜನೆಯ ಕಾರ್ಯಕರ್ತೆ ನಾಗಶ್ರೀ ಜೈನ್,  ಹಳೆ ವಿದ್ಯಾರ್ಥಿ ಚಂದ್ರಶೇಖರ್ ಆಚಾರ್ಯ, ಮಕ್ಕಳ ತಾಯಂದಿರು, ನವಶ್ರೀ ಬ್ರಹ್ಮಶ್ರೀ ಪದ್ಮಶ್ರೀ ಸ್ತೀಶಕ್ತಿ ತಂಡಗಳ  ಸರ್ವ ಸದಸ್ಯರು ಉಪಸ್ಥಿತರಿದ್ದರು.

ಮಹಿಳೆಯರು 30 ಬಗೆಯ ಪೌಷ್ಟಿಕ ಆಹಾರವನ್ನು ಮನೆಯಿಂದ ತಯಾರಿಸಿ ತಂದಿದ್ದು ಅವರಿಗೆ ಶ್ರೀ ಶಕ್ತಿ ಗ್ರೂಪ್ಗಳ ವತಿಯಿಂದ ಬಹುಮಾನವನ್ನು ನೀಡಲಾಯಿತು. ಅಂಗನವಾಡಿ ಕಾರ್ಯಕರ್ತೆಯ ಶಾಂತ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments