ಸೆ.19 ಇರುವೈಲು ಸಾರ್ವಜನಿಕ ಗಣೇಶೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 ಸೆ.19 ಇರುವೈಲು ಸಾರ್ವಜನಿಕ ಗಣೇಶೋತ್ಸವ 



ಮೂಡುಬಿದಿರೆ:ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇರುವೈಲು ಇದರ ಆಶ್ರಯದಲ್ಲಿ 12 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.19 ಮಂಗಳವಾರ ದಿಂದ ಬುಧವಾರದ ವರೆಗೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದ ಮುಂಭಾಗದ ಮೈದಾನದಲ್ಲಿ ಜರಗಲಿದೆ.

19 ನೇ ಬುಧವಾರ ಬೆಳಿಗ್ಗೆ 7-30ಕ್ಕೆ ವಿಗ್ರಹ ಪ್ರತಿಷ್ಠೆ ನಂತರ  ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು ರಾತ್ರಿ 8 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ. 

ಆ ದಿನ ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, 

ಮುಖ್ಯ ಅತಿಥಿಗಳಾಗಿ ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ , ಕೃಷ್ಣ ಆಸ್ರಣ್ಣರು ಕುಪ್ಪೆಪದವು, ಕರ್ನಾಟಕ ಉಚ್ಛ ನ್ಯಾಯಾಲಯದ ನಿರ್ದೇಶಿತ ಹಿರಿಯ ನ್ಯಾಯಾವಾದಿ ಐ ತಾರಾನಾಥ ಪೂಜಾರಿ, ಹೈಕೋರ್ಟ್ ವಕೀಲ ಧನಂಜಯ ಶೆಟ್ಟಿ , ಮೂಡುಬಿದಿರೆ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನ್ .ಟಿ , ಮಾಜಿ ತಾಲೂಕು ಪಂಚಾಯತ್ ಸದಸ್ಯ ಆರ್ .ಕೆ ಪೃಥ್ವಿರಾಜ್ , ಇರುವೈಲು ಗ್ರಾಮ ಪಂಚಾಯತ್ ಅಧ್ಯಕ್ಷ ಲಲಿತಾ, ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ, ಉದ್ಯಮಿ ಸತೀಶ್ಚಂದ್ರ ಸಾಲ್ಯಾನ್ ಪಾಣಿಲ ಪಾಲ್ಗೊಳ್ಳಿದ್ದಾರೆ. ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಉಮೇಶ್ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ.

20 ನೇ ಬುಧವಾರ ಮಧ್ಯಾಹ್ನ ವೈಭವದ ಶೋಭಾಯಾತ್ರೆ ಹೊರಡಲಿದ್ದು ಜಿಲ್ಲೆಯ ಅನೇಕ ಪ್ರಸಿದ್ಧ ಕುಣಿತ ಭಜನಾ ತಂಡಗಳು, ಹುಲಿವೇಷ, ಬೃಹತ್ ಬೊಂಬೆ ಕುಣಿತ, ಚೆಂಡೆ ಬಳಗ ಗಳು ಮುಂತಾದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ದೊಂದಿಗೆ ಸೂರ್ಯಸ್ತಕ್ಕೆ ಸರಿಯಾಗಿ ಫಲ್ಗುಣಿ ನದಿಯಲ್ಲಿ ಗಣಪತಿ ಮೂರ್ತಿಯ ಜಲಸ್ಥಂಬ ನೆಯ ಪುಣ್ಯ ಕಾರ್ಯ ನಡೆಯಲಿದೆ.

Post a Comment

0 Comments