ಮೂಡುಬಿದಿರೆ: ಯುವಕ ಮಂಡಲ (ರಿ.) ಮತ್ತು ಪ್ರಜ್ಞಾ ಯುವತಿ ಮಂಡಲ ಪಡುಮಾರ್ನಾಡು ಜಂಟಿಯಾಗಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದಿ| ಕೃಷ್ಣಪ್ಪ ಪೂಜಾರಿ ಕೆಂಪೂಲು ಇವರ ಸವಿನೆನಪಿನಲ್ಲಿ ಮುದ್ದು ಕೃಷ್ಣ ಸ್ಪರ್ಧೆ ಹಾಗೂ ಕ್ರೀಡೋತ್ಸವವು ಅಮನಬೆಟ್ಟು ಬಾಕ್ಯಾರಿನಲ್ಲಿ ಭಾನುವಾರ ನಡೆಯಿತು.
ಮಾರ್ನಾಡು ಹೊಯಿಪಾಲಬೆಟ್ಟು ದೈವಸ್ಥಾನದ ಅನುವಂಶಿಕ ಮೊಕ್ತೇಸರ ರಾಜೇಶ್ ಬಲ್ಲಾಳ್ ಸ್ಪರ್ಧೆಯನ್ನು ಉದ್ಘಾಟಿಸಿದರು. ವೆ. ಮೂ. ಅನಂತಪದ್ಮನಾಭ ಅಸ್ರಣ್ಣರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಯತೀಂದ್ರ ರಾವ್ ಪಾಡಿಮನೆ, ಯುವಕ ಮಂಡಲದ ಅಧ್ಯಕ್ಷ ಸಂದೀಪ್ ಆಚಾರ್ಯ, ಯುವತಿ ಮಂಡಲದ ಅಧ್ಯಕ್ಷೆ ಸುಗುಣ ಗುಮಡಬೆಟ್ಟು, ಯುವಕ ಮಂಡಲದ ಗೌರವ ಅಧ್ಯಕ್ಷ ರಮೇಶ್ ಶೆಟ್ಟಿ ಹಾಗೂ ಪಾಪಣ್ಣ ಪೂಜಾರಿ ಉಪಸ್ಥಿತರಿದ್ದರು. ಯುವಕ ಮಂಡಲ ಕಾರ್ಯದರ್ಶಿ ವೈಷ್ಣವ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಸುಮಾರು 25ಕ್ಕು ಅಧಿಕ ಮಕ್ಕಳು ಮುದ್ದುಕೃಷ್ಣ ಸ್ಫರ್ಧೆಯಲ್ಲಿ ಭಾಗವಹಿಸಿದರು.
2023 ನೇ ಸಾಲಿನಲ್ಲಿ ಶಿಕ್ಷಣದಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ರಮೇಶ್ ಶೆಟ್ಟಿ ಪನರೊಟ್ಟು, ದೇವಕೀ ಕೃಷ್ಣಪ್ಪ ಪೂಜಾರಿ ಹಾಗೂ ಯುವಕ ಮಂಡಲ ಮತ್ತು ಯುವತಿ ಮಂಡಲದ ಅಧ್ಯಕ್ಷರು ಹಾಗೂ ಯುವಕ ಮತ್ತು ಯುವತಿ ಮಂಡಲದ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಕ್ರೀಡಾಕೂಟದಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು.
ಯುವಕ ಮಂಡಲದ ಜೊತೆ ಕಾರ್ಯದರ್ಶಿ ಪ್ರಜ್ವಲ್ ಪೂಜಾರಿ ಮಾರ್ನಾಡ್ ನಿರೂಪಿಸಿದರು. ಉಗ್
0 Comments