ಪಣಪಿಲದಲ್ಲಿ ವೈಭವದ ಮೊಸರು ಕುಡಿಕೆ ಸಂಪನ್ನ:ಬಿಜೆಪಿ ರಾಜ್ಯಾಧ್ಯಕ್ಷರು ಸೇರಿದಂತೆ ಗಣ್ಯರು ಭಾಗಿ
ಶ್ರೀ ಇಟಲ ಗೆಳೆಯರ ಬಳಗ ಪಣಪಿಲ ಇದರ ವತಿಯಿಂದ ನಡೆಯುವ 13ನೇ ವರ್ಷದ ಮೊಸರು ಕುಡಿಕೆ ಉತ್ಸವವು ಅನೇಕ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು. ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರು ಹಾಗೂ ಮಂಗಳೂರು ಸಂಸದರಾದ ನಳಿನ್ ಕುಮಾರ್ ಕಟೀಲು, ಮಾಜಿ ಶಾಸಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಮೂಡುಬಿದಿರೆ, ಪ್ರಮುಖರಾದ ಕೆಪಿ ಜಗದೀಶ್ ಅಧಿಕಾರಿ, ಸುಕೇಶ್ ಎದಮೇರು,ಅಮರ್ ಕೋಟೆ ಸಹಿತ ಇತರೆ ಪ್ರಮುಖರು ಭಾಗಹಿಸಿದ್ದರು.
30ಕ್ಕೂ ಅಧಿಕ ಮುದ್ದು ಕೃಷ್ಣ ಸ್ಪರ್ಧಾಳುಗಳು ಭಾಗವಹಿಸಿದ್ದು ಈ ಬಾರಿಯ ವಿಶೇಷವಾಗಿತ್ತು. ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳು, ಶಾಲಾ ಮಕ್ಕಳಿಂದ ಮನೋರಂಜನಾ
ಕಾರ್ಯಕ್ರಮಗಳು ಹಾಗೂ ಮೂಡುಬಿದಿರೆಯ ಪ್ರತಿಷ್ಠಿತ ಪಿಂಗಾರ ಕಲಾವಿದರಿಂದ ಪುದರ್ ಎಂಚ ದೀವೊಡು ಎಂಬ ನಾಟಕ ಕಾರ್ಯಕ್ರಮ ಜರುಗಿತು.
ಬಳಗದ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಕುಮಾರ್ ಹಾಗೂ ಇತರರು ಕಾರ್ಯಕ್ರಮದ ಆಯೋಜನೆ ಮಾಡಿದ್ದರು.
0 Comments