ಮಂಪರು ಪರೀಕ್ಷೆಗೆ ನನ್ನ ಒಪ್ಪಿಗೆ ಇಲ್ಲ:ಆರೋಪಿ ಸಂತೋಷ್ ರಾವ್ ಸಿಬಿಐಗೆ ಬರೆದ ಪತ್ರ ವೈರಲ್

ಜಾಹೀರಾತು/Advertisment
ಜಾಹೀರಾತು/Advertisment

 ಮಂಪರು ಪರೀಕ್ಷೆಗೆ ನನ್ನ ಒಪ್ಪಿಗೆ ಇಲ್ಲ:ಆರೋಪಿ ಸಂತೋಷ್ ರಾವ್ ಸಿಬಿಐಗೆ ಬರೆದ ಪತ್ರ ವೈರಲ್



ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿರುವ ಧರ್ಮಸ್ಥಳದ ಪಾಂಗಳ ನಿವಾಸಿ ಕುಮಾರಿ ಸೌಜನ್ಯಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.


ಆರೋಪಿ ಸಂತೋಷ್ ರಾವ್ ಮಂಪರು ಪರೀಕ್ಷೆಗೆ ನನ್ನ ಒಪ್ಪಿಗೆ ಇಲ್ಲ ಎಂದು ಸಿಬಿಐಗೆ ಬರೆದುಕೊಟ್ಟ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. 


ಆರಂಭದಲ್ಲಿ ಈ ಬಗ್ಗೆ ಸಿಬಿಐ ವರದಿ ನೀಡಿದ್ದರೂ ಹೋರಾಟಗಾರರು ಇದನ್ನು ಒಪ್ಪಿರಲಿಲ್ಲ‌. ಸಂತೋಷ್ ರಾವ್ ಮಂಪರು ಪರೀಕ್ಷೆಗೆ ಒಪ್ಪಿಲ್ಲ ಎನ್ನುವುದು ಸುಳ್ಳು ಎಂದು ಸಾರಿದ್ದರು. ಆದರೆ ಈಗ ಸ್ವತಃ ಸಂತೋಷ್ ರಾವ್ ತನ್ನದೇ ಕೈಬರಹದಲ್ಲಿ ಸಿಬಿಐಗೆ ಬರೆದ ಪತ್ರವು ವೈರಲ್ ಆಗಿದೆ. ಈ ಪರೀಕ್ಷೆಗೆ ನಾನು ಒಪ್ಪಿಗೆ ಕೊಡುವುದಿಲ್ಲ ಎಂದು ಬರೆದು ಕೊಟ್ಟಿರುತ್ತಾನೆ.


ಯಾವುದೇ ವ್ಯಕ್ತಿಯ ಅನುಮತಿ ಇಲ್ಲದೆ ಮಂಪರು ಪರೀಕ್ಷೆ ಮಾಡುವುದಕ್ಕೆ ಭಾರತದಲ್ಲಿ ಅವಕಾಶ ಇಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ.

Post a Comment

0 Comments