ಮೂಡುಬಿದಿರೆ ಪುರಸಭೆಯ ನಿವೃತ್ತ ಮುಖ್ಯಾಧಿಕಾರಿ ಎಂ. ಭೋಜರಾಜ ಪೂವಣಿ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ಪುರಸಭೆಯ ನಿವೃತ್ತ ಮುಖ್ಯಾಧಿಕಾರಿ ಎಂ. ಭೋಜರಾಜ ಪೂವಣಿ



ಮೂಡುಬಿದಿರೆ:  ಅಲಂಗಾರ್ ನಿವಾಸಿ, ಮೂಡುಬಿದಿರೆ ಪುರಸಭೆಯ ನಿವೃತ್ತ ಮುಖ್ಯಾಧಿಕಾರಿ  ಎಂ. ಭೋಜರಾಜ ಪೂವಣಿ (೮೩) ಅವರು ಭಾನುವಾರ  ರಾತ್ರಿ ನಿಧನ ಹೊಂದಿದರು. 

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಮಾಜಿ ಸಚಿವ ಅಮರನಾಥ ಶೆಟ್ಟಿ ಅವರ ಸತೀರ್ಥ (ಕ್ಲಾಸ್‌ಮೇಟ್)ರಾಗಿದ್ದ ಭೋಜರಾಜರು ಕ್ರೀಡಾಪಟುವೂ ಆಗಿದ್ದರು. ಮೂಡುಬಿದಿರೆ ಜೈನ ಹೈಸ್ಕೂಲು, ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಓದಿ ಆಗಿನ ಮೂಡುಬಿದಿರೆ ಟೌನ್ ಪಂಚಾಯತ್‌ನಲ್ಲಿ  ಉದ್ಯೋಗಸ್ಥರಾಗಿ ಬಳಿಕ ಪದೋನ್ನತಿ ಹೊಂದುತ್ತ ಬೈಂದೂರಿನಲ್ಲಿ ಪುರಸಭಾ  ಮುಖ್ಯಾಧಿಕಾರಿಯಾಗಿ. ಮೂಲ್ಕಿ. ಉಡುಪಿ, ಕಾರ್ಕಳ ಮತ್ತು  ಮೂಡುಬಿದಿರೆಯಲ್ಲಿ  ಸೇವೆ ಸಲ್ಲಿಸಿ‌1999ರಲ್ಲಿ ನಿವೃತ್ತಿ ಹೊಂದಿದ್ದರು.

ಪತ್ನಿ, ಐವರು ಪುತ್ರಿಯರನ್ನು ಆವರು ಅಗಲಿದ್ದಾರೆ. 

ಅವರ ನಿಧನಕ್ಕೆ  ಮಾಜಿ ಸಚಿವ ಕೆ. ಅಭಯಚಂದ್ರ, ಚೌಟರ ಅರಮನೆ ಕುಲದೀಪ ಎಂ., ಪುರಸಭಾ ಹಾಲಿ ಮುಖ್ಯಾಧಿಕಾರಿ ಇಂದು ಎಂ. ಸಂತಾಪ ವ್ಯಕ್ತಪಡಿಸಿದ್ದಾರೆ.

Post a Comment

0 Comments