ಬೆಳುವಾಯಿ ಮೈನ್ ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ, ಚಿಕ್ಕಿ ವಿತರಣೆ
ಮೂಡುಬಿದಿರೆ: ತಾಲೂಕಿನ ಸರಕಾರಿ ಉನ್ನತೀಕರಿಸಿದ ಶಾಲೆ ಬೆಳುವಾಯಿ ಮೈನ್ ಇಲ್ಲಿನ ಮಕ್ಕಳಿಗೆ ಸರಕಾರ ಕೊಡ ಮಾಡಿದ ಮೊಟ್ಟೆ ಮತ್ತು ಚಿಕ್ಕಿಯನ್ನು ಶುಕ್ರವಾರ ವಿತರಿಸಲಾಯಿತು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಭಾಸ್ಕರ ಆಚಾರ್ಯ ಬೆಳುವಾಯಿ, ಪಂಚಾಯತ್ ಸದಸ್ಯರಾದ ಪ್ರವೀಣ್ ಮಸ್ಕರೇನಸ್, ರಘು ಪೆಲಕುಂಜ, ಶಾಲಾ ಮುಖ್ಯ ಶಿಕ್ಷಕಿ ರಾಜೇಶ್ವರಿ ನಾಯಕ್ ಈ ಸಂದರ್ಭದಲ್ಲಿದ್ದರು.
ಈ ಶಾಲೆಯ ಒಟ್ಟು 450 ವಿದ್ಯಾರ್ಥಿಗಳಿದ್ದಾರೆ.
0 Comments