ಭಂಡಾರಿ ಸಮಾಜದಿಂದ ಆಟಿಡೊಂಜಿ ದಿನ
ಮೂಡುಬಿದಿರೆ: ಭಂಡಾರಿ ಸಮಾಜ ಸೇವಾ ಸಂಘ (ರಿ,) ಮೂಡುಬಿದಿರೆ ಇದರ ಹತ್ತನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವು ಮೂಡುಬಿದಿರೆಯ ಎಂಸಿಎಸ್ ಬ್ಯಾಂಕಿನ ಕಲ್ಪವೃಕ್ಷ ಸಭಾಂಗಣದಲ್ಲಿ ನಡೆಯಿತು. ತುಳುನಾಡ ಸಾಂಸ್ಕೃತಿಕ ವಿಮರ್ಶಕರು ಹಾಗೂ ನಟ, ನಿರ್ಮಾಪಕ ತಮ್ಮಣ್ಣ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಈಗಿನ ಸಮಯದಲ್ಲಿ ಆಡಂಬರದ ಭೂತಾರಾಧನೆಯ ಅವಶ್ಯಕಥೆ ಇಲ್ಲ ಹಿಂದಿನ ಕಾಲದಲ್ಲಿ ನಡೆದು ಬಂದ ಕಟ್ಟು ಕಟ್ಟಲೆಯಂತೆ ಭೂತಾರಾಧನೆಯನ್ನು ಮಾಡಬೇಕೆಂದ ಅವರು
ಭಂಡಾರಿ ಸಮುದಾಯದ ಮಹತ್ವದ ಬಗ್ಗೆ ವಿವರಣೆ ನೀಡಿ ಹಿಂದಿನ ಕಾಲದಲ್ಲಿ ಮರಣ ಹೊಂದಿದ ಮನೆಯನ್ನು ಭಂಡಾರಿ ಬಂದು ಶುದ್ಧ ಮಾಡಿದ ನಂತರವೇ ಮುಂದಿನ ಕೆಲಸ ಕಾರ್ಯಗಳನ್ನು ಮಾಡಲಾಗುವುದು ಎಂದು ಭಂಡಾರಿ ಸಮುದಾಯದ ಮಹತ್ವವನ್ನು ವಿವರಿಸಿದರು.
ಭಂಡಾರಿ ಸಮಾಜದವರು ತಂದ ಸುಮಾರು 40 ಬಗೆಯ ತಿಂಡಿ ತಿನಿಸುಗಳನ್ನು ಮುಖ್ಯ ಅತಿಥಿಯಾಗಿ ದಿನಕರ ಭಂಡಾರಿ ಕಣoಜಾರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ರಂಗ ನಟರು, ರಂಗ ನಿರ್ದೇಶಕರು ಇವರು ಉದ್ಘಾಟಿಸಿದರು. ಹಿಂದಿನ ಕಾಲದಲ್ಲಿ ಜನರು ಎಲ್ಲಾ ಮುಕ್ತವಾಗಿ ಮಾತನಾಡಿ ಕಾಲವನ್ನು ಕಳೆಯುತ್ತಿದ್ದರು ಈಗಿನ ಕಾಲದ ಜನರಿಗೆ ಮುಕ್ತವಾಗಿ ಮಾತನಾಡಲು ಸಮಯದ ಕೊರತೆ ಎದ್ದು ಕಾಣುತ್ತದೆ ಎಂದರು. ಪ್ರಸಾದ್ ಭಂಡಾರಿ ಕಾನ ಉದ್ಯಮಿ ಮುಂಬೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ಎನ್ .ಪ್ರಕಾಶ್ ಭಂಡಾರಿ ವಹಿಸಿದ್ದರು.
ಸಂಘದ ಗೌರವಾಧ್ಯಕ್ಷರುಗಳಾದ ವಾಸುದೇವ ಭಂಡಾರಿ ಉಳಿಯ, ಶಾಂತ ಕೆ ಭಂಡಾರಿ ಬಸವನ ಕಜೆ, ವಸಂತಿ ಜೆ ಭಂಡಾರಿ, ಸುಮಿತ್ರ ಕೆ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಂತರ ಜಾನಪದ ಕ್ರೀಡೆಗಳು, ನೃತ್ಯಗಳು ನಡೆದವು.
ಸತೀಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಯೋಗೇಶ್ ಭಂಡಾರಿ ಸ್ವಾಗತಿಸಿದರು. ಗುರುಪ್ರಸಾದ್ ಭಂಡಾರಿ ವಂದಿಸಿದರು.
0 Comments