ಮಂಗಳೂರಿಗೆ ವಂದೇಭಾರತ್ ಯಾವಾಗ? ಡಬಲ್ ಗುಡ್ ನ್ಯೂಸ್ ನೀಡಿದ ಸಂಸದ ನಳಿನ್

ಜಾಹೀರಾತು/Advertisment
ಜಾಹೀರಾತು/Advertisment

 ಮಂಗಳೂರಿಗೆ ವಂದೇಭಾರತ್ ಯಾವಾಗ? ಡಬಲ್ ಗುಡ್ ನ್ಯೂಸ್ ನೀಡಿದ ಸಂಸದ ನಳಿನ್




ವಂದೇ ಭಾರತ್ ರೈಲು ಸಂಚಾರಕ್ಕೆ ಕಾಸರಗೋಡು ಮಂಗಳೂರು ರೈಲು ಮಾರ್ಗ ಸಜ್ಜಾಗುತ್ತಿದ್ದು ಪುತ್ತೂರು ಸುಬ್ರಹ್ಮಣ್ಯದವರೆಗೆ ವಿದ್ಯುತ್ತೀಕರಣ ಸಂಪೂರ್ಣಗೊಂಡಿದೆ. ಸುಬ್ರಹ್ಮಣ್ಯ ಸಕಲೇಶಪುರ ಅರಣ್ಯ ಇಲಾಖೆಯ ಸಮಸ್ಯೆ ಇದ್ದು ಅತಿ ಶೀಘ್ರದಲ್ಲೇ ಬಗೆಹರಿಯಲಿದೆ. ಈ ಮಧ್ಯೆ ಮಂಗಳೂರು ಗೋವಾ ನಡುವಿನ ಮತ್ತೊಂದು ವಂದೇ ಭಾರತ್ ರೈಲು ನಮ್ಮೂರಿಗೆ ಬರಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.


ಕಂಕನಾಡಿ ರೈಲ್ವೆ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಮಂಗಳೂರಿಗೆ ಎರಡೆರಡು ವಂದೇ ಭಾರತ್ ರೈಲು ಬರಲಿದೆ ಎಂದು ಹೇಳಿದ್ದಾರೆ. ಈ ಕಾರ್ಯಕ್ಕಾಗಿ ನಮ್ಮ ಕೆಲಸ ಭರದಿಂದ ಸಾಗುತ್ತಿದೆ ಎಂದು ಅವರು ತಿಳಿಸಿದರು.

Post a Comment

0 Comments