" ಪವರ್ ಫ್ರೆಂಡ್ಸ್" ನಿಂದ ಉಚಿತ ಕೀಲು ಮರುಜೋಡಣ ಶಿಬಿರ, ಆಧಾರ್ ಅಭಿಯಾನ, ಪ್ರಯೋಜನ ಪಡೆದುಕೊಂಡ 1802 ಮಂದಿ ಫಲಾನುಭವಿಗಳು
ಮೂಡುಬಿದಿರೆ: 60 ರ ಸಂಭ್ರಮದಂಗವಾಗಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೂಡುಬಿದಿರೆ, ಪವರ್ ಫ್ರೆಂಡ್ಸ್ ಬೆದ್ರ ಮತ್ತು ಸಮಾಜ ಮಂದಿರ ಇವುಗಳ ಸಹಭಾಗಿತ್ವದಲ್ಲಿ ಶ್ರೀನಿವಾಸ ಆಸ್ಪತ್ರೆ ಮುಕ್ಕ ಸುರತ್ಕಲ್ ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವುಗಳ ಸಹಯೋಗದಲ್ಲಿ ಸಮಾಜಮಂದಿರದಲ್ಲಿ ಉಚಿತ. ಬೃಹತ್ ಸ್ವರೂಪದ ಮೊಣಕಾಲು ಮತ್ತು ಸೊಂಟದ ಕೀಲು ಮರು ಜೋಡಣೆಯ ತಪಾಸಣ ಶಿಬಿರ ಮತ್ತು ಆಧಾರ್ ನೋಂದಣಿ/ತಿದ್ದುಪಡಿ ಅಭಿಯಾನ ಮತ್ತು ಅಂಚೆ ಇಲಾಖೆಯ ವಿವಿಧ ಸೇವೆಗಳ ಕಾರ್ಯಕ್ರಮವು ಭಾನುವಾರ ಸಮಾಜ ಮಂದಿರದಲ್ಲಿ ನಡೆಯಿತು.
ಸಮಾಜ ಮಂದಿರ ಸಂಘದ ಅಧ್ಯಕ್ಷ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ. ಶ್ರೀಪತಿ ಭಟ್ ಅವರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ
ಮುಕ್ಕ ಶ್ರೀನಿವಾಸ ಆಸ್ಪತ್ರೆಯ ಮೂಳೆ ಮತ್ತು ಕೀಲು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಶಶಿರಾಜ್ ಶೆಟ್ಟಿ ,
ಅಂಚೆ ಇಲಾಖೆಯ ಪುತ್ತೂರು ವಿಭಾಗದ ಎಸ್‌ಎಸ್‌ಪಿ ನವೀನ್‌ಚಂದ್ರ, ಪವರ್ ಫ್ರೆಂಡ್ಸ್ ಅಧ್ಯಕ್ಷ ವಿನಯ ಕುಮಾರ್ `ಭಾಗವಹಿಸಿದ್ದರು.
ಸುಧಾಕರ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.
ಗಣೇಶೋತ್ಸವ ಸಮಿತಿ ಸಂಚಾಲಕ ರಾಜಾರಾಮ ನಾಗರಕಟ್ಟೆ ವಂದಿಸಿದರು.
ಜನತಾ ಹಾಲ್ ಮತ್ತು ಆಧಾರ್ ಜೋಡಣೆ, ತಿದ್ದುಪಡಿ ಶಿಬಿರದಲ್ಲಿ ಸಮೂಹ ಅಪಘಾತ ವಿಮೆ, ಪ್ರಧಾನಮಂತ್ರಿ ಜನಸುರಕ್ಷಾ ಯೋಜನೆ, ಅಂಚೆ ಉಳಿತಾಯ ಖಾತೆಗಳಿಗೆ ಆಧಾರ್ ಜೋಡಣೆ, ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ, ಗಂಡುಮಕ್ಕಳಿಗಾಗಿ ಸುಕುಮಾರ ಸಮೃದ್ಧಿ ಯೋಜನೆ, ಹೆಣ್ಣು ಮಕ್ಕಳಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆ ಇವುಗಳ ಸೌಲಭ್ಯ ಆಧಾರ್ ಕಾರ್ಡ್, ಪಾನ್‌ಕಾರ್ಡ್, ಪಿಪಿ ಅಳತೆಯ 2 ಫೋಟೋಗಳನ್ನು ತರಬೇಕು. ಇದಲ್ಲದೆ, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್,ಮೊಬೈಲ್ ಬ್ಯಾಂಕಿಂಗ್, ಪಾನ್‌ಕಾರ್ಡ್ (ಆಫ್ ಲೈನ್), ಇ ಶ್ರಮ್ ಕಾರ್ಡ್/ಆಧಾರ್ ಕಾರ್ಡ್, ಸಿಎಸ್‌ಸಿ ಸೇವೆ, ಪಾಸ್‌ಪೋರ್ಟ್ ನೋಂದಣಿ/ ರಿನಿವಲ್ ನಡೆಸಿಕೊಡಲಾಯಿತು.
ಶಿಬಿರದಲ್ಲಿ ಒಟ್ಟು 1802 ಮಂದಿ ಫಲಾನುಭವಿಗಳು ಪ್ರಯೋಜನವನ್ನು ಪಡೆದುಕೊಂಡರು.
0 Comments