ಉಚಿತ ಮೂಳೆ ಮತ್ತು ನರರೋಗ ತಪಾಸಣೆ

ಜಾಹೀರಾತು/Advertisment
ಜಾಹೀರಾತು/Advertisment

 ಉಚಿತ ಮೂಳೆ ಮತ್ತು ನರರೋಗ ತಪಾಸಣೆ



ಮೂಡುಬಿದಿರೆ: ರೋಟರಿ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ, ಎಂ.ಡಿ.ಆರ್.ಸಿ ಮತ್ತು ಜಿ.ವಿ.ಪೈ ಆಸ್ಪತ್ರೆ ಮೂಡುಬಿದಿರೆ ಇವುಗಳ ಆಶ್ರಯದಲ್ಲಿ ಭಾನುವಾರ ಉಚಿತ ಮೂಳೆ ಮತ್ತು ನರರೋಗ ತಪಾಸಣಾ ಶಿಬಿರವು  ಜಿ.ವಿ.ಪೈ ಆಸ್ಪತ್ರೆಯಲ್ಲಿ ನಡೆಯಿತು.

 ಮೂಳೆ ತಜ್ಞ ಡಾ.ಗುರುಪ್ರಸಾದ್ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಇಂದು ನಾವು ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಕೆಲಸ ಮಾಡುತ್ತಿರುವುದರಿಂದ ನಮ್ಮ ಮೂಳೆಗಳು ಸಕ್ರಿಯವಾಗಿರುವುದಿಲ್ಲ ಅಲ್ಲದೆ ಬಿಸಿಲಿಗೆ ಹೋಗದೆ ಇರುವುದರಿಂದ ವಿಟಮಿನ್ ಡಿ ಯ  ಕೊರತೆ ಹೆಚ್ಚಾಗುತ್ತಿದೆ ಇದರಿಂದಾಗಿ ಮೂಳೆಗಳ ಸವೆತ ಹೆಚ್ಚುತ್ತಿದೆ ಎಂದು ಹೇಳಿದರು.



ರೋಟರಿ ಕ್ಲಬ್ ಮೂಡುಬಿದಿರೆ ಇದರ ಅಧ್ಯಕ್ಷ ನಾಗರಾಜ್ ಬಿ. ಮಾತನಾಡಿ ನಾಲ್ಕು ಸಂಸ್ಥೆಗಳು ಸೇರಿ  ಜನರಿಗಾಗಿ ಒಂದು ಉತ್ತಮವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇಂದು ನಾವು ಧಾವಾಂತದ ಯುಗದಲ್ಲಿದ್ದೇವೆ ನಮ್ಮ ಮೂಳೆಗಳು ಎಷ್ಟು ಬಲಿಷ್ಠವಾಗಿದೆ ಎಂಬುದನ್ನು ತಿಳಿದುಕೊಳ್ಳಲು ಹಾಗೂ ಸಮಸ್ಯೆಗಳಿದ್ದರೆ ಅದನ್ನು ಯಾವ ರೀತಿ ಪರಿಹರಿಸಕೊಳ್ಳಬಹುದು ಎಂಬುದನ್ನು ಅರಿಯಲು ಈ ಶಿಬಿರ ಸಹಕಾರಿಯಾಗಿದೆ ಎಂದರು.



ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಸರಿತಾ ಆಶೀರ್ವಾದ್, ಕಾರ್ಯದರ್ಶಿ ಪೂರ್ಣಿಮಾ ದಾಮೋದರ್,  ರೋಟರಿ ಕ್ಲಬ್ ಕಾರ್ಯದರ್ಶಿ ನಾಗರಾಜ್ ಹೆಗ್ಡೆ, ಇನ್ನರ್ ವ್ಹೀಲ್ ಕ್ಲಬ್ ಮಾಜಿ ಅಧ್ಯಕ್ಷೆ ರಮ್ಯಾ ವಿಕಾಸ್,ಸದಸ್ಯರಾದ ಕಲಾವತಿ ಹೆಗ್ಡೆ, ಡಾ.ಸ್ವರ್ಣಲತಾ, ಶೋಭಾ, ಬಿಂದಿಯಾ,ಸುಚೇತಾ ಕೋಟ್ಯಾನ್, ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷ ಮಹಮ್ಮದ್ ಆರಿಫ್,  ಸದಸ್ಯರಾದ ಶ್ರೀಕಾಂತ್ ಕಾಮತ್, ಡಾ.ಯತಿಕುಮಾರ ಸ್ವಾಮಿ ಗೌಡ , ಮೋಹನ್ ಭಟ್, ಡಾ.ಸೂರ್ಯ ಈ ಸಂದರ್ಭದಲ್ಲಿದ್ದರು.

  ಸುಮಾರು 100ರಷ್ಟು ಫಲಾನುಭವಿಗಳು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

Post a Comment

0 Comments