ವಾಲ್ಪಾಡಿಯಲ್ಲಿ 'ಕಂಡಡೊಂಜಿ ದಿನ'
ಮೂಡುಬಿದಿರೆ: ವಾಲ್ಪಾಡಿಯ ಗ್ರಾಮೋತ್ಸವ ಸಮಿತಿಯ ಆಶ್ರಯದಲ್ಲಿ 'ಕಂಡಡೊಂಜಿ ದಿನ' ಹಾಗೂ ಕಂಬಳ( ಟೈಮಿಂಗ್ಸ್) ವಾಲ್ಪಾಡಿ ಹೊಸಮನೆ ಶಶಧರ ದೇವಾಡಿಗರವರ ಗದ್ದೆಯಲ್ಲಿ ನಡೆಯಿತು.
ಶಶಿಧರ ದೇವಾಡಿಗ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ 'ಇಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಲು ಇಂತಹ ಕಾರ್ಯಕ್ರಮಗಳು ಅಗತ್ಯವಿದ್ದು,ವರ್ಷದಲ್ಲೊಮ್ಮೆಯಾದರೂ ಕೆಸರಿನ ಗದ್ದೆಯಲ್ಲಿ ಕಳೆದು ಕುಷಿ ಪಡಬೇಕೆ'ಂದು ಹೇಳಿದರು.
ಸಮಿತಿ ಅಧ್ಯಕ್ಷ ಆನಂದ ಅವರು ಅಧ್ಯಕ್ಷತೆ ವಹಿಸಿದ್ದರು.
ವಾಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯ ಅರುಣ್ ಕುಮಾರ್ ಶೆಟ್ಟಿ, ಸ್ಥಳೀಯರಾದ ರಾಜು ಶೆಟ್ಟಿ, ಸುಧಾಕರ ಶೆಟ್ಟಿ, ಸಿರಾಜುದ್ದೀನ್,ಶರೀಫ್, ವಿಘ್ನೇಶ್ ಆಚಾರ್ಯ ,ಸುಧಾಕರ ಸುವರ್ಣ,ಶಂಕರ ವಾಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
ಸಂಜೆ ಟೈಮಿಂಗ್ಸ್ ಕಂಬಳ ನಡೆದಿದ್ದು 6 ಜತೆ ಕೋಣಗಳು ಭಾಗವಹಿಸಿತ್ತು. ಕಂಬಳ ಕ್ಷೇತ್ರದ ವಾಲ್ಪಾಡಿ ಹಾಲಾಜೆ ಲೂವಿಸ್ ಸಲ್ದಾನ್ಹ,ಇರುವೈಲು ಪಾಣಿಲ ಸತೀಶ್ ಸಾಲ್ಯಾನ್,ಹೊಸ್ಮಾರು ಸೂರ್ಯ ಸುರೇಶ್ ಶೆಟ್ಟಿ, ಅಳಿಯೂರು ಮಿತ್ತೊಟ್ಟು ಸೀತಾರಾಮ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.
ಕಂಬಳದಲ್ಲಿ ಮೂಡುಕೊಣಾಜೆ ಏರೋಡಿಬೆಟ್ಟ ಯುವ ಬಾಂದವೆರ್ ಪ್ರಥಮ, ವಾಲ್ಪಾಡಿ ಹಾಲಾಜೆ ಲೂವಿಸ್ ಲಾರೆನ್ಸ್ ಡಿಸೋಜ ಅವರ ಕೋಣಗಳು ದ್ವಿತೀಯ ಸ್ಥಾನ ಪಡೆಯಿತು.
ಕಂಡಡೊಂಜಿ ದಿನ ಯಶಸ್ಸಿಗೆ ಸಹಕರಿಸಿದ ಗೋಪಾಲ ವಾಲ್ಪಾಡಿ ಹಾಗೂ ಕಂಬಳ ಯಶಸ್ಸಿಗೆ ಸಹಕರಿಸಿದ ಶಂಕರ ವಾಲ್ಪಾಡಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಮಿತಿಯ ಪದಾಧಿಕಾರಿಗಳಾದ ಮೋಹಿನಿ, ಸುಕನ್ಯ,ದಿವ್ಯ,ರಕ್ಷಿತಾ,ಸುಜಾತ,ಜನಾರ್ದನ, ಇರ್ಷಾದ್,ಶೇಖರ್ ನಾರಾಯಣ, ಸುಮಿತ್ ,ಅಖಿಲೇಶ್,ಆಕಾಶ್,ಆನಂದ ಮಿತ್ತೊಟ್ಟು,ಸುಜಿತ್,ಮಂಜುನಾಥ, ಜ್ಯೋತಿ,ರವಿಚಂದ್ರ,ಸಂದೀಪ್,ಸುಕುಮಾರ್ ಶೇಖರ್,ಗೀತಾ, ಸುರೇಖ,ಶ್ವೇತಾ, ಚಂಪಾವತಿ,ಸಿದ್ದು,ರಮೇಶ್,ಮತ್ತಿತರರು ಉಪಸ್ಥಿತರಿದ್ದರು.
ಅಶ್ರಫ್ ವಾಲ್ಪಾಡಿ ಸ್ವಾಗತಿಸಿ ವಂದಿಸಿದರು.
0 Comments