ಚೌತಿಗಾಗಿ ಮೂಡುಬಿದಿರೆಯಲ್ಲಿ ಸಿದ್ಧಗೊಳ್ಳುತ್ತಿವೆ ಸಾಂಪ್ರಾದಾಯಿಕ ಗಣಪತಿಯ ವಿಗ್ರಹಗಳು

ಜಾಹೀರಾತು/Advertisment
ಜಾಹೀರಾತು/Advertisment

 ಚೌತಿಗಾಗಿ ಮೂಡುಬಿದಿರೆಯಲ್ಲಿ ಸಿದ್ಧಗೊಳ್ಳುತ್ತಿವೆ ಸಾಂಪ್ರಾದಾಯಿಕ ಗಣಪತಿಯ ವಿಗ್ರಹಗಳು



ಮೂಡುಬಿದಿರೆ: ಚೌತಿ ಹಬ್ಬದ ಸಡಗರ ಇನ್ನೇನು ಕೆಲವು ದಿನಗಳಲ್ಲಿ ಆರಂಭಗೊಳ್ಳಲಿದೆ.‌ ಆದರೆ ಗಣೇಶನ  ವಿಗ್ರಹಗಳ ತಯಾರಿಯ ಸಡಗರ ಮಾತ್ರ ಮೂರು ತಿಂಗಳ ಹಿಂದಿನಿಂದಲೇ ಆರಂಭಗೊಂಡು ಕಣ್ಮನ ಸೆಳೆಯಲು ಆರಂಭಿಸುತ್ತವೆ.



ಈ ನಿಟ್ಟಿನಲ್ಲಿ ಮೂಡುಬಿದಿರೆಯ  ವೆಂಕಟ್ರಮಣ ದೇವಸ್ಥಾನದ ಪದ್ಮನಾಭ ಕಾಮತ್ ಅವರ ಕೈಚಳಕದಲ್ಲಿ ಇಲ್ಲಿನ ಪೊನ್ನೆಚ್ಚಾರಿ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ ಆವೆ ಮಣ್ಣಿನ ವಿವಿಧ ಆಕೃತಿಯ 70ರಷ್ಟು ಸಾಂಪ್ರಾದಾಯಿಕ ಗಣಪತಿಯ ವಿಗ್ರಹಗಳು ಈಗಾಗಲೇ ಮೂಡಿ  ಬಂದಿವೆ.



 ಕುಂದಾಪುರದ ಹೆಂಚಿನ ಕಾರ್ಖಾನೆಯಿಂದ ಆವೆ  ಮಣ್ಣನ್ನು ತರಿಸಿ  ಸಾರ್ವಜನಿಕ ಹಾಗೂ ಮನೆಯಲ್ಲಿ ಪೂಜಿಸುವ 6 ಇಂಚು ಎತ್ತರದ ಮತ್ತು 5:30 ಅಡಿ ಎತ್ತರ ತನಕದ  ಗಣಪತಿಯ ವಿಗ್ರಹಗಳು ಶಾಸ್ರ್ತೋಕ್ತವಾಗಿ ಇಲ್ಲಿ ಸಿದ್ಧಗೊಳ್ಳುತ್ತವೆ.


 ಮೂಡುಬಿದಿರೆ ಪರಿಸರ ಸಹಿತ ಇತರ ಕಡೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪೂಜಿಸಲು ಇಲ್ಲಿಯ ಗಣಪತಿಯನ್ನು ಭಕ್ತಾಧಿಗಳು ತೆಗೆದುಕೊಂಡು ಹೋಗುವ ಮೂಲಕ ಗಮನ ಸೆಳೆಯುತ್ತದೆ.

Post a Comment

0 Comments