ಸೆ.10 ರಂದು ಮೂಡುಬಿದಿರೆಯಲ್ಲಿ ಜಿಲ್ಲಾ ಕಂಬಳ ಸಮಿತಿಯ ಮಹಾಸಭೆ

ಜಾಹೀರಾತು/Advertisment
ಜಾಹೀರಾತು/Advertisment

 ಸೆ.10 ರಂದು ಮೂಡುಬಿದಿರೆಯಲ್ಲಿ ಜಿಲ್ಲಾ ಕಂಬಳ ಸಮಿತಿಯ ಮಹಾಸಭೆ



ಮೂಡುಬಿದಿರೆ: ಅವಿಭಜಿತ ದ.ಕ. ಜಿಲ್ಲಾ ಕಂಬಳ ಸಮಿತಿಯ *ಮಹಾಸಭೆಯು ಸೆ.10 ಆದಿತ್ಯವಾರದಂದು  ಬೆಳಿಗ್ಗೆ ಗಂಟೆ 10.00ಕ್ಕೆ ಮೂಡುಬಿದಿರೆಯ ಒಂಟಿಕಟ್ಟೆಯಲ್ಲಿರುವ  ಕೋಟಿ-ಚೆನ್ನಯ ಕಂಬಳ ವಠಾರದಲ್ಲಿರುವ ಸೃಷ್ಠಿ ಗಾರ್ಡನ್ ಸಭಾಂಗಣದಲ್ಲಿ* ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳ್ ರೋಹಿತ್‌ ಹೆಗ್ಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಂಬಳ ವ್ಯವಸ್ಥಾಪಕರು, ಕೋಣಗಳ ಯಜಮಾನರು, ತೀರ್ಪುಗಾರರು, ಓಟಗಾರರು, ಕಂಬಳ ಸಹಕಾರಿ ವರ್ಗದವರು ಭಾಗವಹಿಸುವಂತೆ  ವಿನಂತಿಸಿದ್ದಾರೆ.


ನೂತನ ಕಂಬಳ ಜಿಲ್ಲಾ ಸಮಿತಿ ರಚನೆ ಹಾಗೂ 2023-24 ನೇ ಋತುವಿನ ವಿವಿಧ ಕಂಬಳದ ದಿನಾಂಕಗಳನ್ನು ಅದೇ ದಿನ ನಿರ್ಧರಿಸಲಾಗುವುದು. ಆದ್ದರಿಂದ ಕಂಬಳ ವ್ಯವಸ್ಥಾಪಕರೆಲ್ಲರೂ ತಪ್ಪದೆ ಆ ದಿನ ಹಾಜರಿರುವಂತೆ ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಜೈನ್ ನಾರಾವಿ  ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Post a Comment

0 Comments