ವಿದೇಶಿ ಜೈಲಿನಲ್ಲಿದ್ದಾರೆ ಕಡಬ ಯುವಕ: ಸಂಸದರ ಶೀಘ್ರ ಸ್ಪಂದನೆಗೆ ಜಯಪ್ರಕಾಶ್ ಹರ್ಷ
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಯುವಕ ಸೌದಿ ಅರೇಬಿಯಾದಲ್ಲಿ ಬ್ಯಾಂಕ್ ಹ್ಯಾಕರ್‌ಗಳ ಉಪಟಳದಿಂದ ರಿಯಾದ್‌ನಲ್ಲಿ ಬಂಧಿಯಾಗಿದ್ದ ವಿಚಾರ ಸುದ್ಧಿಯಾಗುತ್ತಲೇ ಸುವರ್ಣ ನ್ಯೂಸ್ ನಿರೂಪಕ ಜಯಪ್ರಕಾಶ್ ಉಪ್ಪಳರವರು ಈ ಕುರಿತು ಫೇಸ್‌ಬುಕ್ ಪೋಸ್ಟ್ ಹಾಕಿ ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲು ರವರನ್ನು ಕೇಳಿಕೊಂಡರು.
ಜಯಪ್ರಕಾಶ್ ಹಾಕಿದ ಪೋಸ್ಟ್ ತಮ್ಮ ಗಮನಕ್ಕೆ ಬರುತ್ತಲೇ ಜಯಪ್ರಕಾಶ್ ಉಪ್ಪಳಗೆ ಕರೆಮಾಡಿದ ಸಂಸದ ನಳಿನ್ ಕುಮಾರ್ ಈ ಬಗ್ಗೆ ತಾನು ಮಾಡಿದ ರಾಜತಾಂತ್ರಿಕ ಕಾರ್ಯಗಳ ಬಗ್ಗೆ ಅವರಲ್ಲಿ ಮಾಹಿತಿ ನೀಡಿದ್ದಾರೆ. ಅಲ್ಲಿನ ರಾಯಭಾರಿ ಕಚೇರಿಯಲ್ಲಿ ತಮ್ಮ ಆಗ್ರಹವನ್ನು ಮಂಡಿಸಿದ್ದರ ಸಂಪೂರ್ಣ ವಿವರಗಳನ್ನು ಸಂಸದರು ನೀಡಿದ್ದಾರೆ. ಈ ಬಗ್ಗೆ ಜಯಪ್ರಕಾಶ್ ಉಪ್ಪಳ ಮತ್ತೆ ಫೇಸ್‌ಬುಕ್ ಪೋಸ್ಟ್ ಮಾಡಿ ಸಂಸದರ ಶೀಘ್ರ ಸ್ಪಂದನೆಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಜಯಪ್ರಕಾಶ್ ಉಪ್ಪಳ ಪೋಸ್ಟ್:
"ಈ ಕಡಬದ ಹುಡುಗ ಊರಿಗೆ ಬರುವುದು ಶತ ಸಿದ್ಧ. ಸ್ವತಃ #NalinKumarKateel ಅವರೇ ಇದೀಗ ನನಗೆ ಖುದ್ದು ಕರೆ ಮಾಡಿ ತಾನು ಕೈಗೊಂಡ ಕ್ರಮಗಳ ಬಗ್ಗೆ ಮತ್ತು ಅಲ್ಲಿನ ರಾಯಭಾರಿ ಕಚೇರಿಗೆ ಅಗತ್ಯವಿರುವ ಮಾಹಿತಿ ಕೂಡ ನೀಡಿದ ಬಗ್ಗೆ ವಿವರಿಸಿದರು. ಇಷ್ಟು ಸ್ಪಂದನೆ ಪ್ರತಿಯೊಬ್ಬ ಜನಪ್ರತಿನಿಧಿಗಳು ನೀಡಿದರೆ ನಿಜಕ್ಕೂ ದೇಶದ ಅಭ್ಯುಧಯ ಸಾಧ್ಯ. Thank u Sir ♥️"
0 Comments