ಪಾಡ್ಯಾರು ಸರಕಾರಿ ಶಾಲೆಯಲ್ಲಿ "ಮಳೆಹಬ್ಬ" ಇಂಗು ಗುಂಡಿ ತೆಗೆದ ವಿದ್ಯಾರ್ಥಿಗಳು
ಮೂಡುಬಿದಿರೆ : ವಿದ್ಯಾರ್ಥಿಗಳಲ್ಲಿ ಪರಿಸರದ ಮಹತ್ವ , ಜಲಸಂರಕ್ಷಣೆಯ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಡ್ಯಾರು ಇಲ್ಲಿ ಗಿಡ ನೆಡುವ ಮತ್ತು ಇಂಗು ಗುಂಡಿ ತೆಗೆಯುವ ಕಾರ್ಯಕ್ರಮ "ಮಳೆ ಹಬ್ಬ" ವನ್ನು ನಡೆಸಲಾಯಿತು.
ಹಿರಿಯ ಪತ್ರಕರ್ತ ಧನಂಜಯ ಮೂಡುಬಿದಿರೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಗಳು ಪರಿಸರ ರಕ್ಷಣೆ ಮಾಡಲು ಬೇರೆ ಬೇರೆ ಜಾತಿಯ ಮರಗಳಾಗುವ ಗಿಡಗಳನ್ನು ನೆಡಬೇಕಾಗಿಲ್ಲ ಬದಲಾಗಿ ಹೂವಿನ ಗಿಡಗಳು, ತರಕಾರಿ ಗಿಡಗಳನ್ನು ನೆಟ್ಟು ಕೂಡಾ ಪರಿಸರವನ್ನು ಸಂರಕ್ಷಿಸಬಹುದು ಆದರೆ ಅದರಲ್ಲಿ ತಮಗೆ ಆಸಕ್ತಿ ಇರಬೇಕೆಂದು ಹೇಳಿದ ಅವರು ಪ್ರೊ. ಡಾ. ಅರವಿಂದ ಮಾಲಗತ್ತಿ ಅವರ 'ಮಳೆ ಬಂದಿತಣ್ಣಾ' ಪರಿಸರ ಗೀತೆ ಹಾಡಿದರು. ಮಂಗಳೂರು ರಾಮಕೃಷ್ಣ ಆಶ್ರಮದ ಪ್ರಜ್ವಲ್ ಶೆಣೈ ನೀರಿಂಗಿಸುವ ಅನಿವಾರ್ಯದ ಬಗ್ಗೆ ಮಾತನಾಡಿದರು.
ಪತ್ರಕರ್ತರಾದ ಪ್ರೇಮಶ್ರೀ ಕಲ್ಲಬೆಟ್ಟು ರಂಜಿತಾ ಭಾಗವಹಿಸಿದ್ದರು.
ನಿವೃತ್ತ ಮುಖ್ಯ ಶಿಕ್ಷಕಿ ಶೋಭಾ ಕೆ., ಅತಿಥಿ ಶಿಕ್ಷಕಿ ಸುಶ್ಮಿತಾ, ಸ್ವಯಂಸೇವಕ ಶಿಕ್ಷಕಿ ಪ್ರತಿಭಾ, ಅಕ್ಷರ ದಾಸೋಹ ಕಾರ್ಯಕರ್ತೆ ಕಸ್ತೂರಿ ಉಪಸ್ಥಿತರಿದ್ದರು ಮುಖ್ಯ ಶಿಕ್ಷಕ ಪ್ರಸನ್ನ ವಿ. ಕಾರ್ಯಕ್ರಮ ಸಂಯೋಜಿಸಿ, ಮಳೆಹಬ್ಬದ ಕುರಿತು ಪ್ರಸ್ತಾವನೆ ಗೈದರು. ವಿವಿಧ ಗಿಡಗಳನ್ನು ನೆಟ್ಟು, ಇಂಗು ಗುಂಡಿ ತೆಗೆಯುವುದರ ಮೂಲಕ ವಿದ್ಯಾರ್ಥಿಗಳು ಸಂಭ್ರಮಿಸಿದರು.
0 Comments