ಸಂಕ್ರಾತಿ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 ಸಂಕ್ರಾತಿ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ 



ಮೂಡುಬಿದಿರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ  ಯೋಜನೆ ಬಿಸಿ ಟ್ರಸ್ಟ್ (ರಿ ) ಮೂಡುಬಿದಿರೆ ಗಡಿಪಲ್ಕೆ ಒಕ್ಕೂಟದ ಸಂಕ್ರಾಂತಿ ಜ್ಞಾನ ವಿಕಾಸ  ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ ಅಂಬೇಡ್ಕರ್ ಭವನ ದಲ್ಲಿ ಜರುಗಿತು.  ಊರಿನ ಗಣ್ಯರಾದ  ಲಕ್ಷ್ಮಿ ನಾರಾಯಣ ಭಟ್ ದೀಪ ಬೆಳಗಿಸಿ ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ  ಯೋಜನಾಧಿಕಾರಿ ಸುನೀತಾ ಅವರು  ಮಾತನಾಡಿ ಜ್ಞಾನ ವಿಕಾಸ  ಕಾರ್ಯಕ್ರಮದ ಉದ್ದೇಶ, ಮಹಿಳೆಯರಿಗೆ  ಸಿಗುವ  ಮಾಹಿತಿಗಳ  ಬಗ್ಗೆ ವಿವರವಾಗಿ ತಿಳಿಸಿ  ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.



ಇನ್ನೊರ್ವ ಸಂಪನ್ಮೂಲ ವ್ಯಕ್ತಿ ಯಾಗಿ ಆಗಮಿಸಿದ  ಕಲ್ಲಮುಂಡ್ಕೂರು ಸರ್ವೋದಯ ಪ್ರೌಢ ಶಾಲೆ   ಶಿಕ್ಷಕ ಗುರು ಅವರು  ಮಹಿಳಾ ಸಬಲೀಕರಣ  ಹಾಗೂ ಮಕ್ಕಳನ್ನು  ಯಾವ ರೀತಿ  ಸಂಸ್ಕೃತಿ ಸಂಸ್ಕಾರ ಕೊಟ್ಟು ತಾಯಂದಿರು  ಬೆಳೆಸಬೇಕು  ಎಂಬ ಬಗ್ಗೆ ಮಾತಾಡಿದರು. ಕಾರ್ಯಕ್ರಮ ದ  ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ  ಜಯ ಪೂಜಾರಿ  ವಹಿಸಿದ್ದರು. ಅಂಬೇಡ್ಕರ್ ಭವನದ  ಅಧ್ಯಕ್ಷ ಉಮೇಶ್ ಸಂಯೋಜಕಿ  ರೇಣುಕಾ, ಸೇವಾಪ್ರತಿನಿಧಿ ವನಜಾಕ್ಷಿ ಉಪಸ್ಥಿತರಿದ್ದರು.  ಶಶಿಕಲಾ ಅವರು ಅನಿಸಿಕೆ ವ್ಯಕ್ತ ಪಡಿಸಿದರು. ಜ್ಞಾನ ವಿಕಾಸ ಸಮನ್ವಯಧಿಕಾರಿ   ವಿದ್ಯಾ ಕಾರ್ಯಕ್ರಮ ನಿರೂಪಿಸಿ ದರು.  ಶಾರದಾ  ಸ್ವಾಗತಿಸಿದರು.  ಉಷಾ ವಂದಿಸಿದರು. ಕಾರ್ಯಕ್ರಮ ದಲ್ಲಿ ಒಕ್ಕೂಟದ ಎಲ್ಲಾ ಸದಸ್ಯರು  ಹಾಜರಿದ್ದರು.

ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಂದ  ವಿವಿಧ ಸಾಂಸ್ಕೃತಿಕ  ಕಾರ್ಯಕ್ರಮ ನೆರವೇರಿತು.

Post a Comment

0 Comments