ಜಿಲ್ಲಾ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟಕ್ಕೆ ಚಾಲನೆ, "ಕಲ್ಪನಾ ಚಾವ್ಲಾ" ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ
ಮೂಡುಬಿದಿರೆ: ದ.ಕ.ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಉಪನಿರ್ದೇಶಕರ ಕಛೇರಿ ಹಾಗೂ ಸರಕಾರಿ ಪ್ರೌಢಶಾಲೆ ನೀರ್ಕೆರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟವು
ಬುಧವಾರ ನಡೆಯಿತು.
'ಕ್ರೀಡಾ ರತ್ನ' ಪ್ರಶಸ್ತಿ ಪುರಸ್ಕೃತ ಕಂಬಳ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಅವರು ಗೋಲ್ ಹೊಡೆಯುವ ಮೂಲಕ ಪಂದ್ಯಾಟಕ್ಕೆ ಚಾಲನೆಯನ್ನು ನೀಡಿದರು.
ಮೂಡುಬಿದಿರೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ರಾಜಶ್ರೀ ಬಿ. ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕ್ರೀಡೆಯಲ್ಲಿ ಸೋಲು- ಗೆಲುವು ಸದಾ ಇದ್ದೇ ಇರುತ್ತೆ ಆದರೆ ಭಾಗವಹಿಸುವುದು ಮುಖ್ಯ. ಹ್ಯಾಂಡ್ ಬಾಲ್ ಕ್ರೀಡೆಗೆ ತರಬೇತಿ ನೀಡಲು ಉತ್ತಮ ತರಬೇತುದಾರರಿದ್ದಾರೆ ಅವರಿಂದ ತರಬೇತಿಯನ್ನು ಪಡೆದು ರಾಜ್ಯ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಹ ಕ್ರೀಡಾಪಟುಗಳಾಗ ಬೇಕೆಂದ ಅವರು ಈಗಾಗಲೇ ಚಂದ್ರಯಾನದ ಮೂಲಕ ನಮ್ಮ ದೇಶಕ್ಕೆ ಗರಿ ಬಂದಿದೆ. ಇದೀಗ ಪ್ರಯೋಗಾಲಯವನ್ನು ಮಾಡಿ ವಿಧ್ಯಾರ್ಥಿಗಳಲ್ಲಿ ವಿಜ್ಞಾನಿಗಳಾಗುವ ಕನಸನ್ನು ಬಿತ್ತಲಾಗುತ್ತಿದೆ ಮುಂದಿನ ದಿನಗಳಲ್ಲಿ ಸಾಧಕ ವಿಜ್ಞಾನಿಗಳು ಮೂಡಿ ಬರಲಿ ಎಂದು ಶುಭ ಹಾರೈಸಿದರು.
ಲಯನ್ಸ್ ಕ್ಲಬ್ ಮುಚ್ಚೂರು ನೀರುಡೆ ಮತ್ತು ದಾನಿಗಳ ಸಹಕಾರದಿಂದ ವ್ಯವಸ್ಥೆಗೊಳಿಸಲಾದ "ಕಲ್ಪನಾ ಚಾವ್ಲಾ" ವಿಜ್ಞಾನ ಪ್ರಯೋಗಾಲಯವನ್ನು ತೆಂಕಮಿಜಾರು ಗ್ರಾ.ಪಂ.ಅಧ್ಯಕ್ಷೆ ಶಾಲಿನಿ ಉದ್ಘಾಟಿಸಿದರು.
ಪ್ರಯೋಗಾಲಕ್ಕೆ ಸಹಕಾರ ನೀಡಿರುವ ದಾನಿಗಳಾದ ಲಯನ್ಸ್ ಕ್ಲಬ್ ಮುಚ್ಚೂರು ನೀರುಡೆಯ ಅಧ್ಯಕ್ಷ ರೋಶನ್ ಡಿ'ಕೋಸ್ತ, ಚಂದ್ರಶೇಖರ ಎಡಪದವು ಮತ್ತು ಶ್ರೀನಿವಾಸ ಗೌಡ, ಜಾನ್ಸನ್ ಡಿ'ಸೋಜ ಅವರನ್ನು ಗೌರವಿಸಲಾಯಿತು.
ಉಪಾಧ್ಯಕ್ಷ ಕರುಣಾಕರ ಶೆಟ್ಟಿ,ಸದಸ್ಯರಾದ ವನಿತಾ, ಜಯಲಕ್ಷ್ಮೀ ಶೆಟ್ಟಿಗಾರ್, ಲಿಂಗಪ್ಪ ಗೌಡ, ಲಯನ್ಸ್ ನ ಎಲ್ ಸಿಐಎಫ್ ನ ಸಂಯೋಜಕ ವೆಂಕಟೇಶ್ ಹೆಬ್ಬಾರ್, ಲಯನ್ಸ್ ಕ್ಲಬ್ ನ ವಲಯಾಧ್ಯಕ್ಷೆ ಪ್ರತಿಭಾ ಹೆಬ್ಬಾರ್, ಊರಿನ ಹಿರಿಯರಾದ ಅಜಿತ್ ಕುಮಾರ್ ಜೈನ್, ಡಾ.ನಾರಾಯಣ ಪೈ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ಪುತ್ರನ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಸ್. ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಹೇಶ್, ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನೇಶ್ ಕುಮಾರ್, ನೀರ್ಕೆರೆ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಯಮುನಾ ಎಡಪದವು ವಿವೇಕಾನಂದ ಕಾಲೇಜಿನ ದೈ.ಶಿ.ಶಿಕ್ಷಕ ಪ್ರೇಮಾನಂದ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನೀರ್ಕೆರೆ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಡಾ.ಪ್ರತಿಮಾ ಹೆಚ್.ಪಿ.ಸ್ವಾಗತಿಸಿದರು.ದೈ.ಶಿ.ಶಿ.ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಿಕ್ಷಕಿಯರಾದ ಭಾಗ್ಯವತಿ ದಾನಿಗಳ ವಿವರ ನೀಡಿದರು. ಸವಿತಾ ವಿಠಲ್ ಕಾರ್ಯಕ್ರಮ ನಿರೂಪಿಸಿದರು. ಅನುಪಮಾ ವಂದಿಸಿದರು.
0 Comments