ಮೂಡುಬಿದಿರೆ: ಕಲಾ ಸಂಘದ ಚಟುವಟಿಕೆಗಳ ಉದ್ಘಾಟನೆ ವ್ಯಕ್ತಿತ್ವದಿಂದ ಯಶಸ್ಸು: ಜೀವನ್ ರಾಂ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ:  ಕಲಾ ಸಂಘದ ಚಟುವಟಿಕೆಗಳ ಉದ್ಘಾಟನೆ ವ್ಯಕ್ತಿತ್ವದಿಂದ ಯಶಸ್ಸು: ಜೀವನ್ ರಾಂ

 


ಮೂಡುಬಿದಿರೆ: ‘ವ್ಯಕ್ತಿತ್ವದಿಂದ ಯಶಸ್ಸು ಬರುತ್ತದೆಯೇ ಹೊರತು ಪ್ರಮಾಣಪತ್ರದಿಂದ ಅಲ್ಲ’ ಎಂದು ಆಳ್ವಾಸ್ ಕಾಲೇಜನ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್ ರಾಂ ಸುಳ್ಯ ಹೇಳಿದರು. 

ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಲಾ ಸಂಘದ 2023-24ರ ಸಾಲಿನ ಚಟುವಟಿಕೆಗಳನ್ನು ಶಿವರಾಮ ಕಾರಂತ ಸಭಾಂಗಣದಲ್ಲಿ ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. 

‘ಕಲೆಗೆ ಬಾಲ್ಯದಲ್ಲೇ ಸೆಳೆತಬೇಕು. ಪರಿಶ್ರಮ ಪಟ್ಟರೆ ಮಾತ್ರ ಯಶಸ್ಸಿನ ಹಾದಿಯಲ್ಲಿ ಸಾಗಲು ಸಾಧ್ಯ. ಕಲಾವಿಭಾಗದಲ್ಲಿ ಅಪರಿಮಿತ ಅವಕಾಶಗಳು ಇವೆ. ಯಾವುದೇ   ವಿಭಾಗಗಳ ಬಗ್ಗೆ ಕೀಳರಿಮೆ ಸಲ್ಲದು’ ಎಂದರು. 

‘ಕಲಾಭ್ಯಾಸ ಹೊಂದಿರುವವರು ದೊಡ್ಡ ದೊಡ್ಡ ಕಂಪೆನಿ ಹುದ್ದೆಗಳಿಗೆ ಆಯ್ಕೆ ಆಗುವುದನ್ನು ನಾವು ಕಾಣುತ್ತಿದ್ದೇವೆ. ಕಲಿಕೆಯ ಜೊತೆ ವ್ಯಕ್ತಿತ್ವವನ್ನು ಕಲೆಯು ರೂಢಿಸುತ್ತದೆ. ಕಲೆ ನಿಮ್ಮ ಪ್ರಪಂಚವನ್ನು ಹಿರಿದಾಗಿಸುತ್ತದೆ. ಸಮಯ ಪರಿಪಾಲನೆಯೂ ಬಹುಮುಖ್ಯ’ ಎಂದರು.  

ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸದಾಕತ್ ಮಾತನಾಡಿ, ಬಂದಂತಹ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ. ಕೈಗೆಟಕುವ ಕನಸು ಇರಿಸಿಕೊಂಡು, ಛಲ ಬಿಡದೆ ಶ್ರಮಪಡಿ. ಗೆಲುವು ನಿಮ್ಮದಾಗುತ್ತದೆ ಎಂದರು. 

ತಂದೆ- ತಾಯಿ ಹಾಗೂ ಜೊತೆಗಿರುವವರನ್ನು ಯಾವತ್ತೂ ಮರೆಯಬಾರದು ಎಂದರು.   

ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ. ಎನ್, ವಾಣಿಜ್ಯ ವಿಭಾದ ಡೀನ್ ಪ್ರಶಾಂತ್ ಎಂ.ಡಿ, ಕಲಾ ವಿಭಾಗ ಡೀನ್ ವೇಣುಗೋಪಾಲ ಶೆಟ್ಟಿ, ಕಲಾ ಸಂಘದ ಸಂಯೋಜಕ ದಾಮೋದರ್ ಸಾಲಿಯಾನ್ ಇದ್ದರು. ಕಲಾ ಸಂಘದ ವಿದ್ಯಾರ್ಥಿ ಭುವನ್ ಸ್ವಾಗತಿಸಿದರು. ಕಲಾ ವಿಭಾಗದ ವಿದ್ಯಾರ್ಥಿ ಅನನ್ಯ ಭಟ್ ನಿರೂಪಿಸಿದರು. ಗಗನ್ ಎನ್. ವಂದಿಸಿದರು.

Post a Comment

0 Comments