ಹಲಸು-ವೈವಿಧ್ಯಮಯ ಹಣ್ಣುಗಳ ಮಹಾಮೇಳ "ಸಮೃದ್ಧಿ"ಗೆ ವಿದ್ಯಾಗಿರಿ ಸಜ್ಜು

ಜಾಹೀರಾತು/Advertisment
ಜಾಹೀರಾತು/Advertisment

 ಹಲಸು-ವೈವಿಧ್ಯಮಯ ಹಣ್ಣುಗಳ ಮಹಾಮೇಳ "ಸಮೃದ್ಧಿ"ಗೆ ವಿದ್ಯಾಗಿರಿ ಸಜ್ಜು



ಮೂಡುಬಿದಿರೆ:  ಕೃಷಿ ಋಷಿ ಡಾ.ಎಲ್‌.ಸಿ.ಸೋನ್ಸ್ ಸ್ಮರಣಾರ್ಥ ನಾಳೆಯಿಂದ ಮೂರು ದಿನಗಳ ಕಾಲ ನಡೆಯುವ  ಹಲಸು-ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿಪರಿಕರಗಳ ಪ್ರದರ್ಶನ ‌ಮತ್ತು ಮಾರಾಟ ಮಹಾಮೇಳ "ಸಮೃದ್ಧಿ"ಗೆ ವಿದ್ಯಾಗಿರಿಯ ಮುಂಡ್ರುದೆಗುತ್ತು ಕೆ.ಅಮರನಾಥ ಶೆಟ್ಟಿ ಸಭಾಭವನವು ಸಿಂಗರಿಸಿಕೊಂಡು ಸಜ್ಜಾಗಿದೆ.    


ಜುಲೈ ೧೪ ರಿಂದ ೧೬ ಮೂಡುಬಿದಿರೆಯಲ್ಲಿ ಹಲಸು, ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ

ಮೂಡುಬಿದಿರೆ : ಹಲಸು ವೈವಿಧ್ಯಮಯ ಹಣ್ಣುಗಳ ಮಹಾಮೇಳ ಸಮಿತಿವತಿಯಿಂದ ಹಿರಿಯ  ಕೃಷಿ ತಜ್ಞ ಡಾ| ಎಲ್ ಸಿ ಸೋನ್ಸ್ ಸ್ಮರಣಾರ್ಥ "ಸಮೃದ್ಧಿ"

ಹಲಸು ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಹಾ ಮೇಳ ಜುಲೈ ೧೪ ರಿಂದ ೧೬ ರವರೆಗೆ ವಿದ್ಯಾಗಿರಿಯ ಕೆ ಅಮರನಾಥಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ.  ಈ ಮಹಾಮೇಳಕ್ಕಾಗಿ ೧೫೦ ಅಧಿಕ ಮಳಿಗೆಗಳನ್ನು ತೆರೆಯಲಾಗಿದೆ. ದೇಶಿಯ ಮತ್ತು ವಿದೇಶಿಯ ಹಣ್ಣುಗಳ ಗಿಡಗಳ ಮಾರಾಟದ ೧೫ ಕ್ಕು ಹೆಚ್ಚು ನರ್ಸರಿಗಳು ಪಾಲ್ಗೊಳ್ಳಲಿದೆ. ಅಲ್ಲದೆ ಅಪರೂಪದ ಚಂದ್ರಹಲಸು, ಮಂಕಾಲೆರೆಡ್, ಹಾಗೂ ಸಿದ್ದು ಹಲಸಿನ ತಳಿಗಳ ಸಹಿತ ಸ್ಥಳೀಯ ತಳಿಗಳು ಇಲ್ಲಿ ಪ್ರದರ್ಶನಕ್ಕಿವೆ. ರಾಮನಗರ, ದೇವನಳ್ಳಿ, ತುಮಕೂರು, ಸಖರಾಯಪಟ್ಟಣ ಮತ್ತಿತರ ಜಿಲ್ಲೆಗಳ ವೈವಿಧ್ಯಮಯ ತಳಿಗಳ ಹಲಸಿನ  ಹಣ್ಣುಗಳ ಬೃಹತ್ ಸಂಗ್ರಹದ ಪ್ರದರ್ಶನ ನಡೆಯಲಿದೆ.ಅಲ್ಲದೆ ರಂಬೂಟನ್, ಮ್ಯಾಂಗೋಸ್ಟಿನ್, ಡ್ರ್ಯಾಗನ್ , ಬಟರ್ ಪ್ರೂಟ್, ಸಹಿತ ವಿದೇಶಿ ಹಣ್ಣುಗಳ ಪ್ರದರ್ಶನ ಅಲ್ಲದೆ ಹಣ್ಣು ತರಕಾರಿಗಳಿಂದ ತಯಾರಾದ ಸಿದ್ದ ತಿನಿಸುಗಳ ಬೃಹತ್ ಸಂಗ್ರಾಹ, ಜೈನ , ಬ್ರಾಹ್ಮಣ, ಗೌಡ ಸಾರಸ್ವತ ಸಮುದಾಯಗಳ ವಿಶೇಷ ಪ್ರಾದೇಶಿಕ ತಿಂಡಿ ತಿನಿಸುಗಳು ಅಲಂಕಾರಿಕ ವಸ್ತುಗಳು, ಮಣ್ಣಿನ ಮಡಿಕೆಗಳು, ಗೃಹ ಉಪಯೋಗಿ ವಸ್ತುಗಳ ಮೇಳ, ಆಯುರ್ವೇದ , ಪ್ರಕೃತಿ ಚಿಕಿತ್ಸೆ, ಆಹಾರ ಮತ್ತು ಪೋಷಕಾಂಶಗಳ ಪ್ರಾತ್ಯಕ್ಷತೆ ಮತ್ತು ಮಾಹಿತಿ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ನವವಿಧ ಸಿರಿಧಾನ್ಯಗಳ ಬೃಹತ್ ಸಂಗ್ರಹವಿದೆ. ಈ ಸಂದರ್ಭದಲ್ಲಿ ಕೃಷಿಕರಿಗೆ ಉಪಯುಕ್ತ ಮಾಹಿತಿಗಳನ್ನೊಳಗೊಂಡ ವಿಚಾರ ಸಂಕೀರ್ಣವು ನಡೆಯಲಿದೆ. 

 ಆಳ್ವಾಸ್ ಶಿಕ್ಷಣ ಪ್ರತಿಷ್ಠನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರ ನೇತೃತ್ವದಲ್ಲಿ ನಡೆಯುವ ಈ ಮೇಳದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅರಣ್ಯ ಇಲಾಖೆ, ಕೃಷಿ ವಿಜ್ಞಾನ ಕೇಂದ್ರಗಳು, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಹಾಗೂ ವಿವಿಧ ಸರ್ಕಾರಿ ಇಲಾಖೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ರೈತ ಸಂಘಟನೆಗಳು ಮೂಡುಬಿದಿರೆಯ ಎಂಸಿಎಸ್ ಬ್ಯಾಂಕ್, ಅಂತರಾಷ್ಟ್ರೀಯ ಸೇವಾ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ಈ ಮಹಾಮೇಳದಲ್ಲಿ ಕೈಜೋಡಿಸಲಿವೆ.

Post a Comment

0 Comments