ಅನಾರೋಗ್ಯ ಪೀಡಿತೆಗೆ ಆರ್ಥಿಕ ನೆರವು
ಮೂಡುಬಿದಿರೆ: ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆ ನಿವಾಸಿ, ಅನಾರೋಗ್ಯಪೀಡಿತೆ ಪುಷ್ಪಾ ಅವರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಅಲಂಗಾರು ವತಿಯಿಂದ ಸಮಿತಿಯ ಅಧ್ಯಕ್ಷ ಎಂ.ದಯಾನAದ ಪೈ ಅವರ ನೇತೃತ್ವದಲ್ಲಿ ಆರ್ಥಿಕ ಸಹಾಯ ನೀಡಲಾಯಿತು.
ಯೋಜನೆಯ ಸೇವಾನಿರತೆ ಉಷಾ ಕಿರಣ್, ಅಚ್ಚರಕಟ್ಟೆ ಒಕ್ಕೂಟದ ಅಧ್ಯಕ್ಷ ಸದಾನಂದ ಕುಲಾಲ್, ಉಪಾಧ್ಯಕ್ಷ ಆನಂದ ನಾಯಕ್, ಕಾರ್ಯದರ್ಶಿ ಜಯರಾಮ್ ಉಪಸ್ಥಿತರಿದ್ದರು.
0 Comments