ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ವಿದ್ಯಾಗಿರಿ ಕೆ. ಅಮರನಾಥ ಶೆಟ್ಟಿ ಸಭಾಭವನದಲ್ಲಿ ಕೃಷಿ ಋಷಿ ಎಲ್.ಸಿ ಸೋನ್ಸ್ ಸ್ಮರಣಾರ್ಥ ಸಮೃದ್ಧಿ ಎಂಬ ಹಲಸು ವೈವಿಧ್ಯಮಯ ಹಣ್ಣುಗಳ ಆಹಾರೋತ್ಸವ ಇಂದು ಪ್ರಾರಂಭಗೊಂಡಿದೆ.
3 ದಿನಗಳ ಕಾಲ ಈ ಪ್ರದರ್ಶನ ಮತ್ತು ಮಾರಾಟ ಮಹಾಮೇಳ ಜರಗಲಿದ್ದು, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯದ ಹಲವು ಭಾಗಗಳಿಂದ ಮತ್ತು ಕೇರಳ ರಾಜ್ಯದಿಂದ ಹಲಸು, ಹಣ್ಣು ಮಾರಾಟದ ಕೃಷಿಕರು ಈಗಾಗಲೇ ಸಮಾವೇಶಗೊಂಡಿದ್ದಾರೆ.
ಹಲಸಿನ ಹಣ್ಣಿನ ಬೃಹತ್ ದ್ವಾರ ಹಾಕಲಾಗಿದ್ದು, ಜನರನ್ನು ಆಕರ್ಷಿಸುತ್ತಿದೆ.
0 Comments