ಮೂಡುಬಿದಿರೆ : ಸರಕಾರಿ ಮತ್ತು ಅನುದಾನ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಅಕ್ಷರ ದಾಸೋಹ ನೌಕರರ ಸಮಸ್ಯೆಗಳನ್ನು ಸರಕಾರ ಪರಿಹರಿಸಬೇಕು ಎಂದು ಆಗ್ರಹಿಸಿ, ಮಂಗಳವಾರ ಮೂಡುಬಿದಿರೆ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ತಾಲೂಕಿನ ಕ.ರಾ. ಅಕ್ಷರ ದಾಸೋಹ ನೌಕರರ ಸಂಘದವರು ಪ್ರತಿಭಟನೆ ನಡೆಸಿದರು.
ಮೂಡುಬಿದಿರೆ ಸಿಐಟಿಯುನ ಮಾಜಿ ಅಧ್ಯಕ್ಷೆ ರಮಣಿ ಪ್ರತಿಭಟಙೆಯನ್ನುದ್ದೇಶಿಸಿ ಮಾತನಾಡಿ ದಿನಕ್ಕೆ ಆರು ಗಂಟೆಗಿಂತಲೂ ಅಧಿಕ ಸಮಯ ಕೆಲಸ ಮಾಡುವ ಅನಿವಾರ್ಯ ಪರಿಸ್ಥಿತಿಯಲ್ಲಿರುವ ರಾಜ್ಯದ ೧,೧೭,೦೦೦ ಮಂದಿ ಆಕ್ಷರ ದಾಸೋಹ ನೌಕರರಿಗೆ ಕನಿಷ್ಟ ಕೂಲಿ ರೂ. ೨೧,೦೦೦ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಅಕ್ಷರ ದಾಸೋಹ ನೌಕರರಾಗಿ ನಿವೃತ್ತಿ ಹೊಂದಿರುವವರಿಗೆ ಏನೂ ಪರಿಹಾರ ಕೊಡದೆ ಕೆಲಸದಿಂದ ಕೈಬಿಟ್ಟಿದ್ದಾರೆ.ಏಕಗಂಟಿನ ಪರಿಹಾರ ನೀಡುವುದಾಗಿ ಹೇಳಿ ಮಾತು ತಪ್ಪಿದ್ದಾರೆ. ಕೆಲಸ ಇಲ್ಲದೆ ಅತಂತ್ರರಾಗಿರುವ ಇವರಿಗೆಲ್ಲ ಒಂದು ಲಕ್ಷ ರೂ. ಪರಿಹಾರ ಒದಗಿಸಬೇಕು. ೨೦೨೩ರ ರಾಜ್ಯ ಬಜೆಟ್‌ನಲ್ಲಿ ಸಾವಿರ ರೂ. ಗೌರವಧನ ಹೆಚ್ಚಳ ಮಾಡುವುದಾಗಿ ಹೇಳಿದ್ದರೂ ಇನ್ನೂ ಹಣ ಬಿಡುಗಡೆ ಮಾಡಿಲ್ಲ. ಮಾರ್ಗಸೂಚಿಯಲ್ಲಿ ೪ ತಾಸು ಕೆಲಸ ಎಂದಿದ್ದರೂ ೬ ತಾಸು ದುಡಿಯುವ ಕಾರಣ ಇದನ್ನು ೬ ಗಂಟೆ ಎಂದು ತಿದ್ದುಪಡಿ ಮಾಡಬೇಕು. ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿ ಮುಖ್ಯಶಿಕ್ಷಕರು ಮತ್ತು ಮುಖ್ಯಅಡುಗೆಯವರು ಮಾಡುತ್ತಿದ್ದುದನ್ನು ತೆಗೆದು ಎಸ್‌ಡಿಎಂಸಿ ಅಧ್ಯಕ್ಷರಿಗೆ ನೀಡಿರುವುದು ಸರಿಯಲ್ಲ, ಇದನ್ನು ಬದಲಿಸಿ ಮತ್ತೆ ಈ ಹಿಂದಿನಂತೆ ನಿರ್ವಹಿಸುವಂತಾಗಬೇಕು. ಕೆಲಸದಲ್ಲಿರುವಾಗ ಆಕಸ್ಮಿಕವಾಗಿ ಮೃತಪಟ್ಟರೆ ಆ ಕೆಲಸವನ್ನು ಅವರ ಕುಟುಂಬದವರಿಗೆ ನೀಡಬೇಕು. ಆಹಾರ ತಯಾರಿ, ಪೂರೈಕೆಯನ್ನು ಕೆಲವೆಡೆ ಎನ್‌ಜಿಓ ಗಳಿಗೆ ನೀಡಿರುವುದನ್ನು ವಾಪಸ್ಸು ಪಡೆದು ಸರಕಾರವೇ ವ್ಯವಸ್ಥೆ ಮಾಡುವಂತಾಗಬೇಕು ಎಂದು ರಮಣಿ ಒತ್ತಾಯಿಸಿದರು.
ಜಿಲ್ಲಾ ಸಮಿತಿ ಪ್ರ. ಕಾರ್ಯದರ್ಶಿ ಗಿರಿಜಾ ಮಾತನಾಡಿ, ಎಲ್ಲ ಶಾಲೆಗಳಲ್ಲಿ ಕನಿಷ್ಟ ಇಬ್ಬರು ಅಡುಗೆಯವನ್ನು ನೇಮಿಸಬೇಕು. ಶಿಕ್ಷಕರಿಗೆ ರಜಾ ಸಂಬಳ ಇರುವಂತೆ, ಆಕ್ಷರ ದಾಸೋಹದ ನೌಕರರಿಗೂ ಎಪ್ರಿಲ್, ಮೇ ಮತ್ತು ಅಕ್ಟೋಬರ ರಜೆಗಳ ಸಮಯ ಸಂಬಳ ನೀಡಬೇಕು. ಈ ನೌಕರರು ಅಡುಗೆ ಕೆಲಸದ ಜತೆಗೆ ಶಾಲಾ ಸ್ವಚ್ಛತೆ, ಕೈತೋಟ ನಿರ್ವಹಣೆ ಮತ್ತಿತರ ಕೆಲಸವನ್ನೂ ಮಾಡುವುದರಿಂದ ಅವರನ್ನು `ಡಿ' ಗ್ರೂಪ್ ನೌಕರರನ್ನಾಗಿ ಪರಿಗಣಿಸಬೇಕು ಎಂದು
ಸಿಐಟಿಯು ಅಧ್ಯಕ್ಷ ಶಂಕರ, ಅಕ್ಷರ ದಾಸೋಹ ನೌಕರರ ಸಂಘದ ಮೂಡುಬಿದಿರೆ ತಾಲೂಕು ಅಧ್ಯಕ್ಷೆ ಶೋಭಾ, ಕೋಶಾಽಕಾರಿ ರಂಜನಿ, ಕಾರ್ಯದರ್ಶಿ ಯಶೋದಾ ಮತ್ತಿತರ ಪದಾಧಿಕಾರಿಗಳು, ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮುಖ್ಯಮಂತ್ರಿಯವರಿಗೆ ತಾಲೂಕು ತಹಶೀಲ್ದಾರರ ಮೂಲಕ ಮನವಿಪತ್ರ ಸಲ್ಲಿಸಲಾಯಿತು.
0 Comments