ಯುವತಿಯ ವೀಡಿಯೋ ಚಿತ್ರೀಕರಣ: ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಎಬಿವಿಪಿ ಯಿಂದ ಆಗ್ರಹ
ಮೂಡುಬಿದಿರೆ: ರಾಷ್ಟ್ರಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಸದ್ದು ಮಾಡಿರುವ ಶೌಚಾಲಯದಲ್ಲಿ ಹಿಂದೂ ಯುವತಿಯರ ವೀಡಿಯೋ ಚಿತ್ರೀಕರಣ ಮಾಡಿರುವ ಉಡುಪಿ ನೇತ್ರಜೋತಿ ಕಾಲೇಜಿನ ವಿದ್ಯಾರ್ಥಿನಿಯರಾದ ಶಬನಾಜ್, ಅಲ್ಫಿಯಾ ಮತ್ತು ಅಲಿಮಾತುಲ್ ಶಾಫಿಯಾ ಎಂಬ ಮೂವರು ವಿದ್ಯಾರ್ಥಿನಿಯರನ್ನು ಜಿಲ್ಲಾಡಳಿತ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಬಿವಿಪಿ ವತಿಯಿಂದ ಮೂಡುಬಿದಿರೆ ಬಸ್ ನಿಲ್ದಾಣದ ಆವರಣದಲ್ಲಿ ಪ್ರತಿಭಟನೆ ನಡೆಸಿ ಸಬ್ ಇನ್ಸ್ಪೆಕ್ಟರ್ ಸಿದ್ದಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವಿದ್ಯಾರ್ಥಿನಿಯರು ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಮಾಡಿ ಅದನ್ನು ತಮ್ಮ ಧರ್ಮದವರೊಂದಿಗೆ ಹಂಚಿಕೊಂಡು ಜಿಹಾದ್ ಬಲೆಗೆ ಸಿಕ್ಕಿಸುವ ಆತಂಕ ಇದೆ. ಸರ್ಕಾರ ಈ ಘಟನೆಯ ಗಂಭೀರತೆ ಮತ್ತು ಸೂಕ್ಷ್ಮತೆಯನ್ನು ಗಮನಿಸಿ ಇಂತಹ ಘಟನೆ ಬೇರೆ ಕಾಲೇಜುಗಳಲ್ಲಿ ಮರುಕಳಿಸದಂತೆ ಜಿಲ್ಲೆಯ ಪ್ರತೀ ಕಾಲೇಜಿನಲ್ಲೂ ಈ ಕುರಿತು ಅರಿವು ಮೂಡಿಸಬೇಕು. ಇಂತಹ ಘಟನೆಯನ್ನು ವರದಿ ಮಾಡಲು ಪ್ರತೀ ಕಾಲೇಜಿನಲ್ಲೂ ಒಂದು ವಿಶೇಷ ಸೆಲ್ ರಚಿಸಬೇಕು ಮತ್ತು ಇದನ್ನು ಗಮನಿಸಲು ಒಂದು ಜಿಲ್ಲಾಮಟ್ಟದ ತಂಡವನ್ನು ರಚಿಸಬೇಕು ಎಂದು ಒತ್ತಾಯಿಸಿದೆ.
ಈಗಾಗಲೇ ಮಾಧ್ಯಮಗಳಲ್ಲಿ ಪ್ರಸಾರವಾದಂತೆ ತಮಾಷೆಗಾಗಿ ಶೌಚಾಲಯದಲ್ಲಿ ವಿಡಿಯೋ ಮಾಡಿದ್ದೇವೆ ಎಂಬುದು ತೀರಾ ಬಾಲಿಷ ಹಾಗೂ ಪ್ರಕರಣವನ್ನು ದಾರಿ ತಪ್ಪಿಸುವ ಹೇಳಿಕೆಯಾಗಿದ್ದು ಇಂತಹ ನೀಚ ಕೃತ್ಯ ಎಸಗುವ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಒಳಗಾಗದೆ ಸತ್ಯಾಸತತೆಯನ್ನು ಪರಿಶೀಲಿಸಿ ಕ್ರಮ ತೆಗೆದುಕೊಂಡು ಇದರ ಹಿಂದಿರುವ ಷಡ್ಯಂತ್ರವನ್ನು ಬಯಲಿಗೆಳೆಯಬೇಕಿದೆ. ಈ ಪ್ರಕರಣದ ಹಿಂದೆ ಬಲವಾದ ಜಿಹಾದಿ ಜಾಲವೊಂದು ಕೆಲಸ ಮಾಡಿರುವುದರ ಕುರಿತು ಯಾವುದೇ ಅನುಮಾನವಿಲ್ಲ. ಕುರಿತು ಆದ್ದರಿಂದ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇದರ ಹಿಂದಿರುವ ಜಾಲವನ್ನು ಬಯಲಿಗಳಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮನವಿಯಲ್ಲಿ ಆಗ್ರಹಿಸಿದೆ.
0 Comments