ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ನಮ್ಮ ಸಮುದಾಯಕ್ಕೆ ಕಳಂಕ: ದಾವೂದ್ ಅಬುಬಕ್ಕರ್ ಆಕ್ರೋಶ
ಉಡುಪಿ ಕಾಲೇಜಿನ ವಿದ್ಯಾರ್ಥಿನಿಯರ ಶೌಚಾಲಯದಲ್ಲಿರುವ ಖಾಸಗಿ ವೀಡಿಯೋ ರೆಕಾರ್ಡ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ದಾವೂದ್ ಅಬುಬಕ್ಕರ್ ಕಿಡಿ ಕಾರಿದ್ದಾರೆ.
ಉಡುಪಿ ಕಾಲೇಜಿನ ವಿದ್ಯಾರ್ಥಿನಿಯರ ಶೌಚಾಲಯದಲ್ಲಿರುವ ಖಾಸಗಿ ವೀಡಿಯೋ ರೆಕಾರ್ಡ್ ಮಾಡಿರುವುದು ಅಕ್ಷಮ್ಯ ಅಪರಾಧ. ಆ ಮೂವರು ಹುಡುಗಿಯರು ನಮ್ಮ ಸಮುದಾಯಕ್ಕೆ ಕಪ್ಪು ಚುಕ್ಕೆ.ನಮ್ಮ ಸಮುದಾಯದ ಅವಹೇಳನ ಮಾಡುವಂತಹಾ ಪ್ರಸಂಗ ಈ ಮೂವರು ಹುಡುಗಿಯರಿಂದ ಬಂದೊದಗಿದೆ.ಇದರ ಹಿಂದಿರುವ ವ್ಯವಸ್ಥಿತ ಸಂಚನ್ನು ಪೊಲೀಸ್ ಇಲಾಖೆ ಬಯಲಿಗೆಳೆಯಬೇಕೆಂದು ಆಗ್ರಹಿಸುತ್ತೇನೆ.
-ದಾವೂದ್ ಅಬುಬಕ್ಕರ್
0 Comments