ಮೂಡುಬಿದಿರೆಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸುವಂತೆ ರೈತಸೇನೆ ಒತ್ತಾಯ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸುವಂತೆ ರೈತಸೇನೆ ಒತ್ತಾಯ




ಮೂಡುಬಿದಿರೆ:ತಾಲೂಕಿನಲ್ಲಿ “ ಬಡವರು, ವಿದ್ಯಾರ್ಥಿಗಳು, ದುಡಿಯುವ ವರ್ಗದವರ ಹಸಿವು ನೀಗಿಸಲು ಕರ್ನಾಟಕ ಸರಕಾರ ಜಾರಿಗೆ ತಂದಿರುವ "ಇಂದಿರಾ ಕ್ಯಾಂಟೀನ್" ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ಆರಂಬಿಸುವಂತೆ  ದ.ಕ ಜಿಲ್ಲಾ ಭಾರತೀಯ ರೈತ ಸೇನೆ ಒತ್ತಾಯಿಸಿ ಸಭಾಪತಿ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಿದರು.

  ತಾಲೂಕಿನ ಆಡಳಿತ ಸೌಧದ ಎದುರಿನಲ್ಲಿರುವ ಹಳೆಯ ತಾಲೂಕು ಕಚೇರಿಯ ಪಡಸಾಲೆಯು ಯಾವುದೇ ಉದ್ದೇಶಕ್ಕೆ ಬಳಕೆಯಾಗದೆ ಇರುವುದರಿಂದ ಇಲ್ಲಿ ಪ್ರಾರಂಭಿಸಿದರೆ ಉತ್ತಮ. ಪಡಸಾಲೆಯ ಸಮೀಪದಲ್ಲಿರುವ ಶಾಲಾ ಕಾಲೇಜು, ಸರಕಾರಿ ಆಸ್ಪತ್ರೆ, ಸರಕಾರಿ ಬಸ್ಸು ನಿಲ್ದಾಣ,ಮಾರುಕಟ್ಟೆ, ತಾಲೂಕು ಕಚೇರಿ, ನ್ಯಾಯಾಲಯ, ಗ್ರಂಥಾಲಯ, ಟೆಂಪೋ ಪಾರ್ಕ್, ರಿಕ್ಷಾ ಪಾರ್ಕ್, ಆಟದ ಮೈದಾನಕ್ಕೆ ಬರುವ ಬಡವರು, ವಿದ್ಯಾರ್ಥಿಗಳು, ದುಡಿಯುವ ವರ್ಗದವರ ಹಸಿವು ನೀಗಿಸಲು ಅನುಕೂಲಕರವಾಗಿರುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

 ಶಾಸಕ ಉಮಾನಾಥ ಎ. ಕೋಟ್ಯಾನ್, ಜಿಲ್ಲಾಧಿಕಾರಿ , ತಹಶೀಲ್ದಾರರು  ಹಾಗೂ ಪುರಸಭೆ ಮುಖ್ಯಾಧಿಕಾರಿ ಅವರ ಮೂಲಕ ಮುಖ್ಯ ಮಂತ್ರಿ ಸಿದ್ಧರಾಮಯ್ಯ  ಅವರಿಗೆ 

ಮನವಿ  ಮಾಡಿದ್ದಾರೆ.

Post a Comment

0 Comments