ಪುತ್ತಿಗೆ ಚಿಕ್ಕಮೇಳ ತಿರುಗಾಟ ಆರಂಭ

ಜಾಹೀರಾತು/Advertisment
ಜಾಹೀರಾತು/Advertisment

 ಜೂ.22 : ಪುತ್ತಿಗೆ ಚಿಕ್ಕಮೇಳ ತಿರುಗಾಟ ಆರಂಭ




ಮೂಡುಬಿದಿರೆ:  ಶ್ರೀ ಕ್ಷೇತ್ರ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಶ್ರೀ ದೇವರ ಹರಿಕೆ ಸೇವಾ ಚಿಕ್ಕಮೇಳ ( ಪುತ್ತಿಗೆ ಚಿಕ್ಕಮೇಳ)ವು ಕಳೆದ “ಪತ್ತನಾಜೆ ” ಯಂದು ಶ್ರೀ ದೇವರ ಸನ್ನಿಧಿಯಲ್ಲಿ ಪ್ರಥಮಸೇವೆ ಆಟವಾಡಿ 34 ನೇ ವರ್ಷದ ತಿರುಗಾಟ ಆರಂಭಿಸಿರುತ್ತದೆ.

ಜೂ 22 ರಿಂದ ಮೂಡುಬಿದಿರೆ ಕೋಟೆಬಾಗಿಲು ಶ್ರೀ ವೀರಮಾರುತಿ ದೇವಸ್ಥಾನದಲ್ಲಿ ಮೊಕ್ಕಾಂ ಇದ್ದು ಮೂಡುಬಿದಿರೆ ಪರಿಸರದ ಎಲ್ಲಾ ಮನೆ ಮನೆಗಳಲ್ಲಿ ದಿನಂಪ್ರತಿ ಸಂಜೆ 6 ರಿಂದ ರಾತ್ರಿ 10 ರವರೆಗೆ ಹರಿಕೆ ಸೇವಾ ಯಕ್ಷಗಾನ ಕಾರ್ಯಕ್ರಮ ನಡೆಸಲಿದೆ ಎಂದು ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಶ್ರೀ ಕ್ಷೇತ್ರ ಪುತ್ತಿಗೆ ಚಿಕ್ಕಮೇಳ ಸಮಿತಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

Post a Comment

0 Comments