ಮೂಡುಬಿದಿರೆ ಗುರು ಸೇವಾ ರತ್ನ ಪುರಸ್ಕಾರ.
ಮೂಡುಬಿದಿರೆ. ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ರಿ ಮೈಸೂರು ಇವರ ಮೂಡುಬಿದಿರೆ ವಲಯದ ಕಾರ್ಯನಿರ್ವಹಿಸುತ್ತಿರುವ ಸಿ ಆರ್ ಪಿ ಮತ್ತು ಬಿ ಐ ಆರ್ ಟಿ ಗಳಿಗೆ ಗುರು ಸೇವಾ ರತ್ನ ಪುರಸ್ಕಾರ ಸಮಾರಂಭ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಭಾಂಗಣದಲ್ಲಿ ನಡೆಯಿತು ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ ಅಧ್ಯಕ್ಷತೆ ವಹಿಸಿದ್ದರು ರೋಟರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನಾರಾಯಣ ಪಿಎಂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ಪ್ರತಿಭೆಗಳನ್ನು ಗುರುತಿಸಿ ಗೌರವಿಸಿದಾಗ ಅವರಲ್ಲಿನ ಕಾರ್ಯ ತತ್ಪರತೆ ಹೆಚ್ಚಾಗುತ್ತದೆ ಎಂದರು. ದೈಹಿಕ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕ ನರೇಶ್ ನಾಯಕ್ ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್ ಎಸ್ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಡಾ ರಾಜಶ್ರೀ ಬಿ ಪ್ರೌಢಶಾಲಾಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಶಿರೂರು ಸಮನ್ವಯಾಧಿಕಾರಿ ಸೌಮ್ಯ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಣ ಸಾರಥಿ ಪ್ರಸನ್ನ ವಿ ಶೆಣೈ ಆಯೋಜಿಸಿದ್ದು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು ನಾಗರತ್ನ ಶಿರೂರು ಕಾರ್ಯಕ್ರಮ ನಿರ್ವಹಿಸಿದ್ದರು.
0 Comments