*ಜೈನ್ ಮಿಲನ್ ಲಂಡನ್ - ವಾರ್ಷಿಕ ಸಭೆ*
ಮೂಡುಬಿದಿರೆ: ಜೈನ್ ಮಿಲನ್ ಲಂಡನ್ ಇದರ ವಿಶೇಷ ವಾರ್ಷಿಕ ಸಭೆಯು ಜೂನ್ ರಂದು ವೋಕಿಂಗ್ ನಗರದಲ್ಲಿ ನಡೆಯಿತು.
ಸಾಮೂಹಿಕ ಪಂಚ ನಮಸ್ಕಾರ ಪಠಣ ಹಾಗೂ ಅತಿಥಿಗಳು ದೀಪ ಬೆಳಗಿಸುವುದರ ಮೂಲಕ ಕಾರ್ಯ್ರಮವನ್ನು ಆರಂಭಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾರತೀಯ ಜೈನ್ ಮಿಲನ್ ಭಾರತ ಇದರ ಕಾರ್ಯಾಧ್ಯಕ್ಷ *ಧರ್ಮಸ್ಥಳ ಸುರೇಂದ್ರ ಕುಮಾರ್* ಹಾಗೂ ಅನಿತಾ ಸುರೇಂದ್ರ ಕುಮಾರ್ ಭಾಗವಹಿಸಿದ್ದರು.
ಜೈನ್ ಮಿಲನ್ ಲಂಡನ್ ಇದರ ಅಧ್ಯಕ್ಷ ಪ್ರೊ. ನರೇಂದ್ರ ಅಳದಂಗಡಿ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಅಶ್ವಿನಿ ಚಂದ್ರ ಪ್ರಭು ಅವರು ವಾರ್ಷಿಕ ವರದಿ ಮಂಡಿಸಿದರು.
"ಜೈನ್ ಮಿಲನ್ ಎಲ್ಲಾ ಕಡೆ ಸೂಜಿಯಂತೆ ಎಲ್ಲರನ್ನೂ ಒಂದುಗೂಡಿಸುವ ಕೆಲಸ ಮಾಡುತ್ತಿದೆ,ವಿದೇಶ ದಲ್ಲಿದ್ದರೂ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನೂ ಪಾಲಿಸುತ್ತಿರುವ ನೀವೆಲ್ಲ ಅಭಿನಂದನೆಗೆ ಅರ್ಹರು "ಎಂದು ತಮ್ಮ ಮಾತಿನಲ್ಲಿ ಅನಿತಾ ಸುರೇಂದ್ರ ಕುಮಾರ್ ರವರು ಹರ್ಷ ವ್ಯಕ್ತಪಡಿಸಿದರು.
ಜೈನ್ ಮಿಲನ್ ಬೆಳೆದು ಬಂದ ರೀತಿ,ಇದರ ಉದ್ದೇಶ ಹಾಗೂ ಪ್ರಸ್ತುತ ಯಾವ ರೀತಿಯಲ್ಲಿ ಜೈನ್ ಮಿಲನ್ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದೆ , ಇದರಿಂದ ನಾವೆಲ್ಲರೂ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಸಾಧನೆ ಮಾಡಲು ಸಾಧ್ಯವಾಗಿದೆ ,ನಮ್ಮ ಯುವ ಪೀಳಿಗೆಗೆ ನಮ್ಮ ಧಾರ್ಮಿಕ ವಿಷಯಗಳ ಭೋದನೆಯೊಂದಿಗೆ ಸಾಮಾಜಿಕವಾಗಿ ಬೆಳೆಯಲು ಹಾಗೂ ಸಾಧಿಸಲು ನಾವೆಲ್ಲಾ ಒಂದಾಗಿ ದುಡಿಯುವ ಜವಾಬ್ದಾರಿ ನಮ್ಮ ಮೇಲಿದೆ.ಜೈನ್ ಮಿಲನ್ ಲಂಡನ್ ನಿಂದ ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ನಡೆಯಲಿ ಎಂದು ಧರ್ಮಸ್ಥಳ ಸುರೇಂದ್ರ ಕುಮಾರ್ ಶುಭ ಹಾರೈಸಿದರು.
ಮಿಲನ್ ಸದಸ್ಯೆ ದೀಕ್ಷಾ ಜೈನ್ ಅವರು "ಪಂಚ ಕಲ್ಯಾಣ"ದ ಮಹತ್ವದ ಬಗ್ಗೆ , ಸದಸ್ಯ *ದಯಾನಂದ ಪಾಟೀಲ* ಅವರು "Acceptance of Disability" ವಿಷಯದ ಬಗ್ಗೆ ಉಪನ್ಯಾಸ ನೀಡಿದರು..
ಸಭಾ ಕಾರ್ಯ್ರಮದ ನಂತರ ಸೌಮ್ಯ .S. ಶರ್ಮ ಅವರಿಂದ ಭರತನಾಟ್ಯ , ಮಿಲನ್ ಸದಸ್ಯರು , ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸದಸ್ಯರಿಗಾಗಿ ಮೋಜಿನ ಆಟಗಳು ನಡೆಯಿತು .
ಜೈನ್ ಮಿಲನ್ ಲಂಡನ್ ಉಪಾಧ್ಯಕ್ಷ *ನಿಖಿಲ್ ಜೈನ್* ವಂದಿಸಿದರು. *ಪ್ರೇಮಾ ಸುಖಾನಂದ್* ರವರು ಶಾಂತಿ ಮಂತ್ರ ಪಠಿಸಿದರು.
ಕಾರ್ಯಕ್ರಮದ ಪ್ರಾಯೋಜಕರಾಗಿ ದಯಾನಂದ ಪಾಟೀಲ ,ಶ್ರೀ.ನಿಖಿಲ್ ಜೈನ್ ,Dr. ವೈಶಾಕ್ ವಿದ್ಯಾಧರ್* ಸಹಕರಿಸಿದರು.
0 Comments