*ಮಾದಕ ವಸ್ತುವಿನಿಂದ ದೂರವಿರೋಣ: ದಿವಾಕರ ರೈ*
ಮೂಡುಬಿದಿರೆ : ಇಲ್ಲಿನ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ಮಾದಕ ವಸ್ತು ವಿರೋಧಿ ಜಾಗೃತಿ ಅಭಿಯಾನದಂಗವಾಗಿ ಕಾರ್ಯಕ್ರಮ ನಡೆಯಿತು.
ಮೂಡುಬಿದಿರೆ ಕ್ರೈಂ ವಿಭಾಗದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ದಿವಾಕರ ರೈ ಅವರು ವಿದ್ಯಾರ್ಥಿಗಳು ಮಾದಕ ವಸ್ತುಗಳನ್ನು ಶಾಶ್ವತವಾಗಿ ವಿರೋಧಿಸುವ ಪ್ರಮಾಣ ವಚನವನ್ನು ಬೋಧಿಸಿ ಮಾತನಾಡಿ ಮಾನವ ಜನ್ಮ ಶ್ರೇಷ್ಠವಾದದ್ದು. ವಿದ್ಯಾರ್ಥಿ ಜೀವನ ಮನುಷ್ಯನ ಪಾಲಿಗೆ ಸುವರ್ಣ ಯುಗ.
ಈ ಅವಧಿಯಲ್ಲಿ ನಾವು ಚೆನ್ನಾಗಿ ಅಧ್ಯಯನ ಮಾಡಿ ಬದುಕನ್ನು ಕಟ್ಟಿಕೊಳ್ಳಬೇಕು. ದುರ್ಜನರ ಸಹವಾಸದಿಂದ ನಾವು ದೂರವಿರಬೇಕು. ಹದಿಹರೆಯದ ಅವಧಿಯಲ್ಲಿಯೇ ಸದ್ಗುಣಗಳನ್ನು ರೂಡಿಸಿಕೊಳ್ಳಬೇಕು. ಇದಕ್ಕಾಗಿ ಮಾದಕ ವಸ್ತುವಿನಿಂದ ದೂರವಿರೋಣ ಎಂದು ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಆರಕ್ಷಕ ಸಿಬ್ಬಂದಿ ಅರುಣ್ ಕುಮಾರ್, ಮುಖ್ಯೋಪಾಧ್ಯಾಯಿನಿ ಭಗಿನಿ ಸುನೀತಾ ಮೊಂತೇರೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕನ್ನಡ ಅಧ್ಯಾಪಕ ಡಾ. ರಾಮಕೃಷ್ಣ ಶಿರೂರು ಕಾರ್ಯಕ್ರಮ ನಿರ್ವಹಿಸಿ, ಅತಿಥಿಗಳನ್ನು ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರಿತೇಶ್ ವಂದಿಸಿದರು.
ಶಿಕ್ಷಕರಾದ ಸಿಸಿಲಿಯ ಡಿಸೋಜ, ರೇಷ್ಮಾ ಡಿಸೋಜ, ಸುನಿತಾ ಪಿಂಟೊ, ಜ್ಯೋತಿ, ಜ್ಯೋತಿಪ್ರಸಾದ್ ಮತ್ತು ಪ್ರೌಢಶಾಲೆಯ ಎಲ್ಲ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
0 Comments